ಕಾಲುವೆಗಳಿಗೆ ನೀರು ಹರಿಸಬೇಕು: ಟಿ.ಟಿ ಹಗೇದಾಳ
ಕೊಲ್ಹಾರ:ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ನದಿ ಪಾತ್ರದಲ್ಲಿ ಮಳೆಯಾಗಿರುವ ಪರಿಣಾಮ ಕೃಷ್ಣಾ ನದಿಯ ಹಿನ್ನೀರಿ ಮಟ್ಟ ಹೆಚ್ಚಳಗೊಂಡಿದೆ ಮುಂಗಾರು ಸಂದರ್ಭದಲ್ಲಿ ಜಿಲ್ಲೆಗೆ ಮಳೆಯಾಗದ ಕಾರಣ ಮುಂಗಾರು ಬೆಳೆಗೆ ಅನುಕೂಲವಾಗಲು ಈ ಭಾಗದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಹಿನ್ನೀರು ನದಿ ಪಾತ್ರ ತುಂಬಿದೆ. ಹೀಗಾಗಿ ಈ ಭಾಗದ ಕಾಲುವೆಗಳಿಗೆ ನೀರು ಹರಿಸುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.