ಕನ್ನಡ ಸಾಹಿತ್ಯ ಇಡೀ ದೇಶಕ್ಕೆ ಪ್ರೇರಣೆ ನೀಡುವ ಸಾಹಿತ್ಯವಾಗಿದೆ
ಬಸವನಬಾಗೇವಾಡಿ:ಕನ್ನಡ ಸಾಹಿತ್ಯ ಇಡೀ ದೇಶಕ್ಕೆ ಪ್ರೇರಣೆ ನೀಡುವ ಸಾಹಿತ್ಯವಾಗಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು ನಮ್ಮ ನಾಡಿನಲ್ಲಿದ್ದಾರೆ. ಸಾಹಿತಿಗಳು ಒಳ್ಳೆಯ ಸಂಸ್ಕಾರ, ಸಂಪ್ರದಾಯಗಳನ್ನು ಕೊಟ್ಟು ಸಮಾಜಕ್ಕೆಮರ‍್ಗರ‍್ಶನ ಮಾಡಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದು.
ಜಗತ್ತಿಗೆ ಸಂಸ್ಕಾರ ನೀಡುವ ಕಲೆ ಸಾಹಿತಿಗಳಿಗಿದೆ. ಅವರ ಸಮಾಜದಲ್ಲಿ ಸಾಮರಸ್ಯದ ಕೊಂಡಿಯಾಗಿದ್ದಾರೆ. ಭಾಷೆ, ಸಂಸ್ಕೃತಿಗೆ ದಕ್ಕೆ ಬಂದಾಗ ಮೊದಲು ಧ್ವನಿ ಎತ್ತುವವರು ಸಾಹಿತಿಗಳು. ಇಂದು ಚಿಂತನ, ಮಂಥನ ಮಾಡುವ ಸಾಹಿತಿಗಳ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ನಾಡು, ನುಡಿ, ಸಂಸ್ಕೃತಿಗೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಇಂದು ಮೊಬೈಲ್ ಹಾವಳಿಯಿಂದಾಗಿ ಓದುವ, ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಸಾಹಿತ್ತಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವ ಮೂಲಕ ಓದುವ ಹವ್ಯಾಸವನ್ನು ಹೆಚ್ಚಿಸಬೇಕಿದೆ. ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸಿ ಕೊಡಬೇಕಿದೆ. ಮಠಾಧೀಶರ ಮರ‍್ಗರ‍್ಶನ ದೊಂದಿಗೆ ಸಾಹಿತ್ತಿಕ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಗ್ರಾಮೀಣ ಜೀವನ ಮರೆತರೆ ಮೌಲ್ಯವನ್ನು ಮರೆತಂತೆ. ಜಾನಪದ ಸಾಹಿತ್ಯ ಸಂರಕ್ಷಣೆ ಮಾಡುವ ಅಗತ್ಯತೆ ಇದೆ. ಜಿಲ್ಲೆಯಲ್ಲಿ ಶರಣ ಸಂಸ್ಕೃತಿ ಹರಡಬೇಕಿದೆ. ಮನಸು, ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಯರನಾಳದ ಗುರುಸಂಗನಬಸವ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇಯಾದ ಸುದರ‍್ಘ ಇತಿಹಾಸವಿದೆ. ಭಾಷೆ ಉಳಿದರೆ ನಮ್ಮ ಅಸ್ಥತ್ವ ಉಳಿಯುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಕನ್ನಡ ತಾಯಿ ಭಾಷೆಯಾಗಿದೆ. ಅದನ್ನು ನಾವು ಉಳಿಸಿದರೆ ನಾಡಿನ ಹಿರಿಮೆ ಹೆಚ್ಚಲಿದೆ. ನಾವು ಕನ್ನಡಕ್ಕಾಗಿ ಏನು ಮಾಡಬೇಕೆಂಬ ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ ಎಂದು ಹೇಳಿದರು.
ಇಂಗಳೇಶ್ವರದ ಡಾ.ಸಿದ್ಧಲಿಂಗ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚರ‍್ಯ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ, ಮುತ್ತಗಿಯ ವೀರರುದ್ರಮುನಿ ಸ್ವಾಮೀಜಿ, ವಕೀಲ ಬಿ.ಕೆ.ಕಲ್ಲೂರ ಮಾತನಾಡಿದರು.
ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಇಂಗಳೇಶ್ವರ ಹಿರೇಮಠದ ಬೃಂಗೀಶ್ವರಲಿಂಗ ಶಿವಾಚರ‍್ಯ ಸ್ವಾಮೀಜಿ, ಜಿ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಕಸಾಪ ತಾಲ್ಲೂಕು ಘಟಕದ ನಿಕಟಪರ‍್ವ ಅಧ್ಯಕ್ಷ ಆರ್.ಜಿ.ಅಳ್ಳಗಿ, ಬಸವರಾಜ ಕೌಲಗಿ ಇದ್ದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಸ್ವಾಗತಿಸಿದರು, ಕೊಟ್ರೇಶ ಹೆಗಡ್ಯಾಳ, ಪ್ರಭಾಕರ ಖೇಡದ ನಿರೂಪಿಸಿದರು. ಕರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಮಹನೀಯರನ್ನು, ಕಸಾಪ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕರ‍್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.