ಹೂಗಾರ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯ ಜು.೧೫ ರಂದು ಬೆಂಗಳೂರು ಚಲೋ
ಇಂಡಿ :ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಸಮೂದಾಯಗಳಲ್ಲಿ ಹೂಗಾರ ಸಮಾಜವು ಒಂದು. ಇದು ಆರ್ಥಿಕವಾಗಿ ಸಾಮಾಜಿಕ ಶೈಕ್ಷಣಿಕ ರಾಜಕೀಯವಾಗಿ ಎಲ್ಲಾ ಸ್ಥರಗಳಿಂದ ಸಮಾಜದ ಮುಖ್ಯವಾಹಿನಿಗೆ ಬರಲು ದಿನಾಂಕ: ಜುಲೈ ೧೫ ರಂದು ಬೆಂಗಳೂರಿನಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಮಟ್ಟಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎಂದುತಾಲೂಕಾ ಅಧ್ಯಕ್ಷ ಸೋಮನಾಥ ಪ್ರಕಾಶ ಹೂಗಾರ ತಿಳಿಸಿದರು.
ಇದೆ ಸಂಧರ್ಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಅಧ್ಯಕ್ಷ ಶ್ರೀ ಬಸವರಾಜ ಹೂಗಾರ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಈ ಧರಣಿ ಸತ್ಯಾಗ್ರಹಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಹಲವಾರು ಜನರು ಈ ಹೋರಾಟದಲ್ಲಿ ಪಾಲ್ಗೋಳಲ್ಲಿದ್ದು ಇಂಡಿ ಮತಕ್ಷೇತ್ರದಿಂದ ಸುಮಾರು ೫೦೦ ಜನ ಸಮಾಜದ್ ಬಂಧುಗಳು ಭಾಗಿಯಾಗುವ ನಿರೀಕ್ಷೆ ಇದೆ.
ಸಮಾಜದ ಬೇಡಿಕೆಗಳು _ ಶರಣ ಹೂಗಾರ ಮಾದಯ್ಯ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ. ರಾಜ್ಯದ ಬಜೆಟನಲ್ಲಿ ಹೂಗಾರ ಸಮಾಜಕ್ಕೆ ೧೦೦ ಕೋಟಿ ಅನುದಾನ ಮಿಸಲು ಜಿಲ್ಲೆಗೊಂದು ಸಮೂದಾಯ ಭವನ ಸ್ಥಾಪನೆ. –ಅರ್ಚಕರಿಗೆ ತಸ್ತಿಕ ಭತ್ಯೆ ಹೆಚ್ಚಳ.- ರಾಜ್ಯದ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರಕಾರಕ್ಕೆ ಒತ್ತಾಯಿಸ ಲಾಗುವುದು.
ಅಲ್ಲದೆ ಅಂದಿನ ಧರಣಿ ಸತ್ಯಾಗ್ರಹಕ್ಕೆ ರಾಜ್ಯದ ಹಲವು ಸಚಿವರು ಮತ್ತು ಶಾಸಕರು. ಮುಖಂಡರುಗಳು ಬೆಂಬಲ ನೀಡಲಿದ್ದು ಹಾಗೂ ಸಮಾಜದ ನಿಗಮ ಮಂಡಳಿ ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ಪತ್ರವನ್ನು ಕೊಡಾ ನೀಡಿದಾರೆ ಹಾಗೂ ಈಗಾಗಲೇ ನಮ್ಮ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ್ ಸಮಾಜಕ್ಕೆ ಯಾವಾಗಲೂ ಸಹಾಯ ಮತ್ತು ಸಹಕಾರ ನೀಡುತ್ತಲೆ ಬಂದಿರುತ್ತನೆ. ಹಾಗೂ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಆದ್ದರಿಂದ ಈ ಅಭೂತಪೂರ್ವ ಸತ್ಯಾಗ್ರಹದ ಯಶಸ್ಸಿಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಮಾಜದ ತಾಲೂಕ ಅಧಕ್ಷ ಶ್ರೀ ಸೋಮನಾಥ ಹೂಗಾರ ಮನವಿ ಮಾಡಿದರು.
ಸಿದ್ದಲಿಂಗ ಪೂಜಾರಿ , ಪುಂಡಲಿAಗ ಹೂಗಾರ , ಗುರುಬಾಳ ಹೂಗಾರ ,ಮಹೇಶ ಹೂಗಾರ , ವಿರೂಪಾಕ್ಷ ಹೂಗಾರ ,ಬಸವರಾಜ ಹೂಗಾರ , ಗಂಗಾಧರ ಪೂಜಾರಿ, ಲವಕುಶ ಪೂಜಾರಿ, ಜಗದೀಶ ಹೂಗಾರ , ಮತ್ತು ನಿವೃತ್ತ ಶಿಕ್ಷಕರಾದ ವ್ಹಿ.ಬಿ. ಪೂಜಾರಿ ಹಾಗೂ ಸಮಾಜದ ಹಲವಾರು ಮುಖಂಡರು ಉಪಸ್ತಿತರಿದ್ದರು.
ಪೋಟೋಕ್ಯಾಪ್ಸನ್ ೧೨ಇಂಡಿ೦೩:ಇAಡಿ ತಾಲ್ಲೂಕ ಹೂಗಾರ ಸಮಾಜದ ತಾಲೂಕಾ ಅಧ್ಯಕ್ಷ ಸೋಮನಾಥ ಪ್ರಕಾಶ ಹೂಗಾರ , ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸುತ್ತಿರುವುದು.