ಜೆಡಿಎಸ್ ಪಕ್ಷಕ್ಕೆ ಮಹಿಳೆರು ಸೇರ್ಪಡೆ ಬಲಬಂದಿದೆ: ಬಿ.ಡಿ ಪಾಟೀಲ
ಇಂಡಿ:ಜೆಡಿಎಸ್ ಪಕ್ಷದ ಇಂಡಿ ಓಬಿಸಿ ನಗರ ಘಟಕದ ಅಧ್ಯಕ್ಷೆಯಾಗಿ ಜ್ಞಾನೇಶ್ವರಿ ಚಿನ್ನಸ್ವಾಮಿಯವರನ್ನು ನೇಮಕ ಆದೇಶಮಾಡಲಾಗಿದೆ ಎಂದು ತಾಲೂಕಾ ಜೆಡಿಎಸ್ ಅಧ್ಯಕ್ಷ ಬಿ.ಡಿ ಪಾಟೀಲ ತಿಳಿಸಿದ್ದಾರೆ.
ಈ ಸಂಧರ್ಬದಲ್ಲಿ ತಾಲೂಕಾ ಅಧ್ಯಕ್ಷ ಬಿ.ಡಿ ಪಾಟೀಲ ಮಾತನಾಡಿ ಮಹಿಳೆಯರು ಶೈಕ್ಷಣಿಕ, ಸಮಾಜಿಕ ,ರಾಜಕೀಯವಾಗ ಇನ್ನಷ್ಟು ಮುಂದೆ ಬರಬೇಕು. ಜೆಡಿಎಸ್ ಪಕ್ಷ ಮಹಿಳೆಯರಿಗೆ ಸಾಕಷ್ಟು ವಿಶೇಷ ಸ್ಥಾನ ಮಾನಗಳನ್ನು ನೀಡಿ ಗೌರವಿಸುತ್ತಿದೆ. ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಆಡಳಿತ ಅವಧಿಯಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗರ್ಬಿಣಿ ಸ್ತಿçÃಯರಿಗೆ ಮಾಸಿಕ ವೇತನ ೬ ಸಾವಿರ ನೀಡುವುದಾಗಿ ಭರವಸೆ ನೀಡಿದ್ದಾರೆ.ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರೆ ಮಹಿಳೆಯರ,ರೈತರ,ಬಡವರ,ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೇಟಿನಲ್ಲಿ ಅನಧಾನ ಮೀಸಲಿಡಲ್ಲಿದ್ದಾರೆ.
ಮಹಿಳೆಯರನ್ನು ತಾಯ್ತನದ ಹೃದಯ ವೈಶಾಲ್ಯತೆಯಿಂದ ಕಾಣುವ ಏಕೈಕ ನಾಯಕ ಕುಮಾರಸ್ವಾಮಿ ಇಂತಹ ಪಣ್ಯಾತ್ಮನ ಕೈಬಲ ಪಡಿಸಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಮಹಿಳೆಯರು ಪಕ್ಷದಲ್ಲಿ ಸೆರ್ಪಡೆಯಾಗುತ್ತಿರುವುದರಿಂದ ಮತ್ತಷ್ಟು ಶಕ್ತಿ ಬಂದAತಾಗಿದೆ ಎಂದರು.
ಮಾಜಿ ಪುರಸಭೆ ಸದಸ್ಯ ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ.ಅಯುಬ ನಾಟೀಕಾರ, ಸಂಜು ಪಾಯಕರ್, ರಾಜು ಮುಲ್ಲಾ, ಇರ್ಫಾನ್ ಪಠಾಣ, ನಿಯಾಝ ಅಗರಖೇಡ, ಬಾಳು ರಾಠೋಡ, ದುಂಡು ಬಿರಾದಾರ, ರವಿ ಸಿಂಧೆ, ರಾಜು ಬನಗೊಂಡೆ ಸೇರಿದಂತೆ ಅನೇಕರಿದ್ದರು.
ಸವಿತಾ ಚೆಲವಾದಿ,ಸುವರ್ಣಾ ಹಾದಿಮನಿ, ರಾಜಮಾ ಬಾಗವಾನ, ದಾವಲಿಜೀ ಶೇಖ,ಆಶಾ ಬಾಗವಾನ ಓಬಿಸಿ ಘಟಕದ ಪದಾಧಿಕಾರಿ ಗಳನ್ನಾಗಿ ಆದೇಶ ನೀಡಲಾಯಿತು.