ಗ್ರಾಮೀಣರ ಹೊರೆ ತಗ್ಗಿಸಲು, ಆರೋಗ್ಯ ಅಮೃತ ಕಾರ್ಯಕ್ರಮ
ಇಂಡಿ:ಗ್ರಾಮೀಣ ಜನತೆಯ ಆರೋಗ್ಯವಂತ ಜೀವನ ಶೈಲಿಗೆ ಒತ್ತು ನೀಡುವ ಮತ್ತು ಗ್ರಾಮದ ಜನರ ರೋಗದ ಹೊರೆ ತಗ್ಗಿಸುವ ಉದ್ದೇಶ ಹೊಂದಿದ, ಹಾಗೂ ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ನಮ್ಮ ರಾಜ್ಯ ಮತ್ತು ಕೇಂದ್ರ ಸರಕಾರ ದಿಂದ ‘’ಆರೋಗ್ಯ ಅಮೃತ’’ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿಯೇ ಜನರ ಆರೋಗ್ಯ ತಪಾಸಣೆನಡೆಯುತ್ತದೆ ಇದರ ಸದುಪಯೋಗ ಜನರು ಪಡೆದುಕೊಳ್ಳಿ ಎಚಿದು ಗ್ರಾಮ ಪಂಚಾಯತ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.
ತಾಲೂಕಿನ ಝಳಕಿ ಗ್ರಾಮದ ಹನುಮಾನ ಮಂದಿರ ಸಮೀಪದ ಅಗಸಿ ಕಟ್ಟೆ ಆವರಣ ದಲ್ಲಿ ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗ ದೊಂದಿಗೆ ನಡೆದ ಆರೋಗ್ಯ ಅಮೃತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮದು ಮೇಹ ಹಾಗೂ ರಕ್ತದ ಒತ್ತಡ ಎರಡೂ ಒಚಿದೇ ನಾಣ್ಯದ ಎರಡು ಮುಖಗಳಿದ್ದಂತೆ, ಇವುಗಳು ಜನರು ಹತೋಟಿಯಲ್ಲಿ ಇಟ್ಟುಕೊಂಡು ಹೋದರೆ ಯಾವುದೇ ಕಾಯಿಲೇ ಗಳು ನಮ್ಮ ಸುತ್ತಮುತ್ತ ಬರುವದಿಲ್ಲಾ, ೪೦ ವರ್ಷಗಳ ನಂತರ ರಕ್ತದ ಇತ್ತಡ ಮತ್ತು ಮದು ಮೇಹ ಪರೀಕ್ಷೆ ಮಾಡಿಕೋಳ್ಳಬೇಕು, ಈ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ ಅದರ ಉಪಯೋಗ ಬಡ ಗ್ರಾಮೀಣ ಜನರು ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಚಡಚಣ ತಾಲೂಕ ಯೋಜನಾ ಸಂಯೋಜಕರು ಕೆ ಎಚ್ ಪಿ ಟಿ ಜಯಶ್ರೀ ಕುಂಬಾರ, ಹಿರಿಯ ಆರೋಗ್ಯ ನಿರಿಕ್ಷಣಾಧಿ ಕಾರಿಗಳು ಎಸ್ ಆರ್ ಗೋಟ್ಯಾಳ, ಪಿ ಆರ್ ಇರಗಾರ, ಬಿ ಎಸ್ ರೇವತಗಾಂವ, ಶ್ರೀಶೈಲ ಕೋಳಿ, ಗೋಪಾಲ ಜಾಗೀರದಾರ, ಗುರುಪಾದಗೌಡ ಬಿರಾದಾರ, ಸೋಮನಿಂಗ ಕಾಗರ, ಮದು ಕೊಡತೆ, ರಾಗವೇಂದ್ರ ಕೆಂಗಾರ, ಶ್ರೀಮತಿ ಅನ್ನಪೂರ್ಣ ಹಿರೇವ್ಮಠ, ಮಾಹಾನಂದ ಬಿರಾದಾರ, ರಾಜೇಶ್ರೀ ಕೂಡಗಿ, ದ್ರಾಕ್ಷಾಯಣಿ ನಂದರಗಿ, ಲಾಲಸಬ ಮುಲ್ಲಾ, ರಾಮಣ್ಣ ಸಗಾಯಿ ಇತತರು ಇದ್ದರು.