ಶಾಸಕ ನಡಹಳ್ಳಿಯವರ ಸಂಕಲ್ಪ ನಡಿಗೆಗೆ ಪಟ್ಟಣದಲ್ಲಿ ಅಭೂತಪೂರ್ವ ಸ್ವಾಗತ
ಸಹಸ್ರ ಸಂಖ್ಯೆಯಲ್ಲಿ ಸಾಥ್ ನೀಡಿದ ಗಣ್ಯರು ವಿದ್ಯಾರ್ಥಿಗಳು, ಗಮನ ಸೆಳೆದ ಕಲಾ ತಂಡಗಳ ನೃತ್ಯ
ನಾಲತವಾಡ:ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಪುತ್ರ ಭರತ್‌ಗೌಡರ ನೇತೃತ್ವದ ‘ಯುವ ಸಂಕಲ್ಪ ನಡಿಗೆ’ ಮಂಗಳವಾರ ಹಿರೇಮುರಾಳ ಹಾಗೂ ನಾಗರಬೆಟ್ಟ ಮೂಲಕ ಪಟ್ಟಣ ಪ್ರವೇಶಿಸಿತು.
ಶಾಸಕರ ನಡಹಳ್ಳಿಯವರ ನೇತೃತ್ವದ ಅಮೃತಮಹೋತ್ಸವದ ಸಂಭ್ರಮದ ಹಬ್ಬ ಬಹುತೇಕ ಐತಿಹಾಸಿಕ ಹಿನ್ನಲೆಗೆ ಸಾಕ್ಷಿ ಯಾಯಿತು. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನಾದ್ಯಂತಹ ಸಾವೀರಾರು ರಾಷ್ಟç ಭಕ್ತರ ಮದ್ಯೆ ಪಟ್ಟಣ ಪ್ರವೇಶಿಸಿದ ಸಂಕಲ್ಪ ನಡಿಗೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾ.ಪಂ ವ್ಯಾಪ್ತಿಯ ಅಂಗನವಾಡಿ, ಆಶಾ ಹಾಗೂ ಶಾಲಾ ಕಾಲೇಜುಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳು ದೇಶಭಕ್ತಿಯ ಪ್ರತೀಕದ ತಿರಂಗಾ ಮಾದರಿಯ ಸೀರೆಗಳು, ಶುಬ್ರ ಬಟ್ಟೆಗಳನ್ನು ತೊಟ್ಟು ನಾಲತವಾಡದವರೆಗೆ ನಡಿಗೆಗೆ ಸಾಥ್ ನೀಡಿದರು.
ಭಾರತ ಮಾತೆಗೆ ವಿನೂತನ ಸ್ವಾಗತ:ಅಮರೇಶ್ವರ ದೇವಸ್ಥಾನದಲ್ಲಿ ಆಶಾ ಕಾರ್ಯಕರ್ತರು ಶಾಸಕರು ಹಾಗೂ ಪುತ್ರ ಭರತ್‌ಗೌಡರನ್ನು ಸ್ವಾಗತಿಸಿದರು, ನಂತರ ಗಣ್ಯರಾದ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಪಟ್ಟಣ ಪ್ರವೇಶಿಸುತ್ತಿದ್ದಂತೆ ಶಾಸಕರ ನಡಹಳ್ಳಿ ಹಾಗೂ ಪುತ್ರ ಭರತ್‌ಗೌಡ, ನಾನಾ ವೇಷ ಧರಿಸಿ ಕಲಾ ಪ್ರದರ್ಶನ ನೀಡಿದ ಮಂಡ್ಯದ ಕಲಾತಂಡಗಳಿಗೆ ಜೆಸಿಬಿ ಯಂತ್ರಗಳ ಸಹಾಯದಿಂದ ಹೂಗುಚ್ಚಗಳನ್ನು ಚೆಲ್ಲಿ ಸ್ವಾಗತಿಸಿದರು.