ಕವಿಗೋಷ್ಠಿಗೆ ಕವನ, ಚುಟಕು ಆಹ್ವಾನ
ಬಸವನಬಾಗೇವಾಡಿ:ಪಟ್ಟಣದ ನಂದಿ ಸಾಹಿತ್ಯ ವೇದಿಕೆಯಿಂದ ಅವಳಿ ಜಿಲ್ಲಾ ಮಟ್ಟದ ಕವನ, ಚುಟುಕು ಕವಿಗೋಷ್ಠಿ ಹಾಗೂನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕವಿ, ಕವಯ ತ್ರಿಯರಿಂದ ಕವನ, ಚುಟಕು ಆಹ್ವಾನಿ ಸಿದೆ.
ಕವನಗಳಿಗೆ ಯಾವುದೇ ವಿಷಯ ವಸ್ತು ನೀಡಲಾಗಿಲ್ಲ. ಕವಿಗಳು ಹೊಸದಾಗಿ ಬರೆದ ತಮ್ಮ ಸ್ವರಚಿತ ಕವನ ಹಾಗೂ ಹಾಸ್ಯ ಚಟಾಕಿಯ ಚುಟುಕುಗಳನ್ನು ಮಹಾಂತೇಶ ಸಂಗಮ, ಅಧ್ಯಕ್ಷರು ನಂದಿ ಸಾಹಿತ್ಯ ವೇದಿಕೆ, ಆಲಮಟ್ಟಿ ರೋಡ್, ಸಂಗಮ ಗಲ್ಲಿ, ನವನಗರ, ಬಸವನಬಾಗೇವಾಡಿ ಈ ವಿಳಾಸಕ್ಕೆ ಇದೇ ಆ. ೧೯ ರೊಳಗೆ ಕಳುಹಿಸಬೇಕು. ಕವಿಗಳಿಗೆ ಪ್ರಮಾಣ ಪತ್ರದ ಕತೆಗೆ ಕೃತಿಯೊಂದನ್ನು ನೀಡಿ ಗೌರವಿಸಲಾಗುತ್ತದೆ.
ಕವನಕ್ಕೆ ೧೫ ಜನ, ಚುಟುಕಿಗೆ ೧೫ ಕವಿಗಳನ್ನು ಆಯ್ಕೆ ಮಾಡುವವರಿದ್ದು, ಮೊದಲು ಬರುವ ಚುಟುಕು, ಕವನಗಳಿಗೆ ಆದ್ಯತೆ ನೀಡಲಾಗುತ್ತದೆ. ಮಾಹಿತಿಗೆ ವಾಟ್ಸಆ್ಯಪ್ ರಹಿತ ೬೩೬೦೯೯೪೧೬೧ ಸಂಖ್ಯೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.
೨೧ ರಂದು ಪೂರ್ವಭಾವಿ ಸಭೆ:ನಂದಿ ಸಾಹಿತ್ಯ ವೇದಿಕೆ ಪದಾಧಿಕಾರಿಗಳ ಆಯ್ಕೆ ಕುರಿತು ಹಾಗೂ ಕವಿಗೋಷ್ಠಿ, ಪದಗ್ರಹಣ ಕಾರ್ಯಕ್ರಮ ರೂಪಿಸುವ ಬಗ್ಗೆ ಆ. ೨೧ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಪಟ್ಟಣದ ವಿಜಯಪುರ ರಸ್ತೆಯ ಕೆ.ಎಸ್.ಅವಟಿ ಇವರ ನಿವೇದಿತಾ ಪ್ರಾಥಮಿಕ ಶಾಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.