ಅಗಸ್ಟ ೧೩ ರಂದು ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಬೈಕ್ ರ‍್ಯಾಲಿ
ಬಸವನಬಾಗೇವಾಡಿ:ಜನರ ಮನೆ ಮನಗಳಲ್ಲಿ ದೇಶಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ ಅ.೧೩ ರಂದು ಪಟ್ಟಣದಲ್ಲಿ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ಬ್ಯಕ್ ರ‍್ಯಾಲಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಯುವಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅಮರಯ್ಯಾ ಹಿರೇಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವತಂತ್ರ ಕ್ಕಾಗಿ ಸಾಕಷ್ಟು ಮಹನೀಯರು ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದ್ದಾರೆ ಅಂತಹ ಮಹಾಪುರುಷರನ್ನು ನಾವೆಲ್ಲರು ನೆನೆಯಬೇಕಾಗಿದೆ, ಅಲ್ಲದೆ ಆಜಾದಿಕಾ ಅಮೃತ್ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡಿರುವAತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಬೂತ ಮಟ್ಟದಲ್ಲಿ ತ್ರೀವರ್ಣ ಧ್ವಜವನ್ನ ಉಚಿತವಾಗಿ ನಿಡಲಾಗುತ್ತಿದೆ.
ಬೈಕ್ ರ‍್ಯಾಲಿಯುವ ಅಂಬೇಡ್ಕರ್ ಸರ್ಕಲ್‌ ನಿಂದ ಬಸವ ಸ್ಮಾರಕದ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಈ ಒಂದು ಬೈಕ ರ‍್ಯಾಲಿ ಕಾರ್ಯಕ್ರಮ ದಲ್ಲಿ ಮಾಜಿ ಸಚಿವ ಎಸ್,ಕೆ, ಬೆಳ್ಳುಬ್ಬಿ, ಹಾಗೂ ಮಂಡಲ ಅಧ್ಯಕ್ಷ ಶಂಕಗೌಡ ಪಾಟೀಲ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಬಾಗವಹಿಸಲಿದ್ದಾರೆ ಎಂದರು.