ಮನೆಯ ಮೇಲೆ ಧ್ವಜಾರೋಹಣ : ಮನೆ ಮುಂದೆ ಭಾರತಾಂಬೆ ಮೂರ್ತಿ
ದೇಶ ಪ್ರೇಮ ಮೆರೆದ ಸಾಹಿತಿ ದಿ,ರುಕ್ಮಿಣಿ ಬಿಂಜಲಬಾವಿ
ಮ0ಜು ಕಲಾಲ
ಬಸವನಬಾಗೇವಾಡಿ:ಕಳೆದ ೩೦ ವರ್ಷಗಳಿಂದ ತಮ್ಮ ಮನೆಯ ಮೇಲೆ ಧ್ವಜಾರೋ ಹಣ ಮಾಡುವ ಮೂಲಕ ದೇಶಪ್ರೇಮ ಮೆರೆದ ಸಾಹಿತಿ ದಿ,ರುಕ್ಮಿಣಿ ಬಿಂಜಲಭಾವಿ ಅವರ ಕಾರ್ಯ ಆದರ್ಶಪ್ರಾಯವಾಗಿದೆ.
ಹೌದು ಪಟ್ಟಣದ ಶ್ರೀಮತಿ ಸಾಹಿತಿ ದಿ,ರುಕ್ಮಿಣಿ ಬಿಂಜಲಭಾವಿ ಸರಕಾರಿ ಶಾಲೆಯ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ಸಾಕಷ್ಟು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿದ ಇವರು ೧೯೯೨ ರಿಂದ ಪ್ರತಿವರ್ಷ ಅಗಸ್ಟ ೧೫ ರಂದು ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದ್ದರು.
ದಿ, ರುಕ್ಮಿಣಿ ಬಿಂಜಲಬಾವಿ ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ದೇಶಭಕ್ತಿ ಗೀತೆಗೆ ಮಕ್ಕಳಿಗೆ ನೃತ್ಯ ತರಭೇತಿ ನೀಡುವ ಮೂಲಕ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಿದ ಹೆಮ್ಮೆ ಇವರದು, ಅಷ್ಟೇ ಅಲ್ಲದೆ ತಮ್ಮ ಮನೆಯ ಮುಂಭಾಗದಲ್ಲಿ ಭಾರತ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿ ನಿತ್ಯ ಭಾರತಾಂಬೆಗೆ ಪೂಜೆ ಸಲ್ಲಿಸುತ್ತಿದ್ದರು. ಇತ್ತಿಚಿಗೆ ಭಾರತಾಂಬೆ ಎಂಬ ಕವನ ಸಂಕಲ ಕೂಡ ಬಿಡುಗಡೆಗೊಳಿಸಿದ್ದಾರೆ.
ಇಂದು ದೇಶದ್ಯಾಂತ ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ಯ ದೇಶದಲ್ಲಿ ಹರ್ ಗರ್ ತಿರಂಗಾ ಎಂಬ ಅಭಿಯಾನ ನಡೆಯುತ್ತಿದೆ ಆದರೆ ಮನೆ ಮೇಲೆ ಧ್ವಜಾರೋಹಣದ ಕನಸು ಕಂಡ ದಿ,ರುಕ್ಮಿಣಿ ಬಿಂಜಲಬಾವಿ ಅವರು ನಮ್ಮೊಂದಿ ಗಿಲ್ಲ ಎಂದು ಅವರ ಸುಪುತ್ರಿ ಸ್ವರೂಪರಾಣಿ ಬಿಂಜಲಬಾವಿ ವಿಶ್ವವಾಣಿಯೊಂದಿಗೆ ತಮ್ಮ ದುಖಃವನ್ನ ತೊಡಿಕೊಂಡರು.
ಪುತ್ರ ವಿಜಯ ರೆಡ್ಡಿ:-ಅಪಾರ ದೇಶಪ್ರೇಮ ಹೊಂದಿರುವ ಸಾಹಿತಿ ರುಕ್ಮಿಣಿ ಬಿಂಜಲಬಾವಿ ಅವರು ನಮ್ಮೊಂದಿಗಿಲ್ಲ ಆದರೆ ಅವರು ಹಾಕಿಕೊಟ್ಟಿರುವ ದೇಶಪ್ರೇಮದ ಕಾರ್ಯ ನಿರಂತರವಾಗಿರುತ್ತದೆ.

