ರಾಷ್ಟ್ರ ನಾಯಕರ ಆದರ್ಶಗಳೆ ಪ್ರೇರಣೆ: ಡಿ.ಆರ್ ಶಹಾ
ಇಂಡಿ :ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್. ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಧ್ವಜ ರ‍್ಯಾಲಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಹಾಗೂ ಸದಸ್ಯ ಸುನೀಲ ಕುಲಕರ್ಣಿ ಚಾಲನೆನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಡಿ.ಆರ್.ಶಹಾ, ನಮ್ಮ ದೇಶದ ಸ್ವಾತಂತ್ರ‍್ಯ ಕ್ಕಾಗಿ ಹೋರಾಡಿದ ಎಲ್ಲ ಮಹನೀಯರ ತ್ಯಾಗ, ಬಲಿದಾನ, ದೇಶಪ್ರೇಮವನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಅಂತಹ ಮಹನೀಯರ ಆದರ್ಶ ತತ್ವಗಳನ್ನು ವಿದ್ಯಾರ್ಥಿ ಗಳು ಮೈಗೂಡಿಸಿಕೊಂಡು ರಾಷ್ಟçಸೇವೆಗೆ ಕಂಕಣ ಬದ್ದರಾಗಬೇಕೆಂದು ಹೇಳಿದರು.
ಧ್ವಜಾ ಜಾತಾ ಕಾರ್ಯಕ್ರಮವು ಪಟ್ಟಣದ ವಿಜಯಪುರ ರಸ್ತೆಯಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತದ ಮಾರ್ಗದಲ್ಲಿ ಸಾಗಿ ಮಿನಿ ವಿಧಾನಸೌದದಲ್ಲಿ ಮುಕ್ತಾಯ ಗೊಂಡಿತು.
ಎನ್.ಸಿ.ಸಿ. ಮಾರ್ಗದರ್ಶಕ ಸಂತೋಷ ಪಾಂಡ್ರೆ ಅವರ ನೇತೃತ್ವದಲ್ಲಿ ಎನ್.ಸಿ.ಸಿ. ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಮಕ್ಕಳು ಮತ್ತು ಶಾಲೆಯ ಚಾಲುಕ್ಯ, ರಾಷ್ಟ್ರಕೂಟ, ಮೌರ್ಯ, ಗಂಗಾ ನಾಲ್ಕು ತಂಡಗಳು ನಡೆಸಿಕೊಟ್ಟ ಸಾಮೂಹಿಕ ಪಥಸಂಚಲನ ನೋಡುಗರನ್ನು ಆಕರ್ಷಿಸಿತು.
ಶಾಲೆಯ ಯುಕೆಜಿ, ಎಲ್‌ಕೆಜಿ ಮಕ್ಕಳು ರಾಷ್ಟ್ರ ನಾಯಕರ ವೇಷಭೂಷಣಗಳು ಧರಸಿ, ಸ್ಥಬ್ದಚಿತ್ರಗಳು ಹಾಗೂ ಸಾಮೂಹಿಕ ನೃತ್ಯ ಎಲ್ಲರ ಮನಸ್ಸನ್ನು ಸೆಳೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಽಕಾರಿ ಕಲ್ಪನಾ ಶಹಾ,ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಪರವೀನ ಜಮಾದಾರ, ಶಾಲಾ ವಿಭಾಗದ ಪ್ರಾಚಾರ್ಯ ಪ್ರಕಾಶ ಪಾಟೀಲ್ ಸೇರಿದಂತೆ ಇಂಡಿ ಕಂದಾಯ ಇಲಾಖೆಯ ಸಿಬ್ಬಂಧಿ ವರ್ಗ, ಗಣ್ಯರು, ಪಾಲಕರು ಹಾಗೂ ಶಾಲಾ ವಿಭಾಗದ ಎಲ್ಲ ಸಿಬ್ಭಂದಿ ವರ್ಗದವರು ಹಾಗೂ ಮಕ್ಕಳು ಧ್ವಜ ಜಾಥಾದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಭೀ.ಎ.ಕಡಿಹಳ್ಳಿ ಹಾಗೂ ಶಿಕ್ಷಕಿ ಸವಿತಾ ಸಾಲಿ ಜಾಥಾ ನಡೆಸಿಕೊಟ್ಟರು.