ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು ಪ್ರಕರಣಗಳು: ೬೧೨ ಇತ್ಯರ್ಥ
ಹರಪನಹಳ್ಳಿ:ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆದ ಒಟ್ಟು ೭೩೭ ಪ್ರಕರಣಗಳನ್ನು ಕೈಗೆತ್ತಿಕೊಂಡು, ೬೧೨ ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕಿರವ್ವ ಕೆಳಗೇರಿ, ನ್ಯಾಯಾ ಧೀಶರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಲೋಕ ಅದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡ೦ತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೫೦೨ ಪ್ರಕರಣಗಳ ಪೈಕಿ ೪೪೯ ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ೩೯,೪೦,೫೫೦-೦೦ ರೂ.ಗಳು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು.
ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೨೩೫ ಪ್ರಕರಣಗಳ ಪೈಕಿ ೧೬೩ ಪ್ರಕಣ ಗಳನ್ನು ಇತ್ಯರ್ಥ ಪಡೆಸಿ, ಒಟ್ಟು ೪೮,೯೩,೦೨೨-೦೦ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು ೬೧೨ ಪ್ರಕರಣ ಗಳು, ಮತ್ತು ೮೮,೩೩,೫೭೨.-೦೦ ರೂ. ಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದ ಉಭಯ ನ್ಯಾಯಾದೀಶರುಗಳು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ, ಹಿರಿಯ ಮತ್ತು ಹಿರಿಯ ನ್ಯಾಯಾವಾದಿಗಳಿಗೆ, ಹಾಗೂ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡ ಎಲ್ಲಾ ಕಕ್ಷಿದಾರರಿಗೆ ಉಭಯ ನ್ಯಾಯಾ ಲಯದ ನ್ಯಾಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕಿರವ್ವ ಕೆಳಗೇರಿ, ನ್ಯಾಯಾಧೀಶರುಗಳು ಅಭಿನಂಧನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ, ಕೆ.ಜಗದಪ್ಪ, ಉಪಾಧ್ಯಕ್ಷ ಡಿ.ಬಿ.ವಾಸುದೇವ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯಧರ್ಶಿ ಎಂ. ನಾಗೇಂದ್ರಪ್ಪ, ಹುಲಿಯಪ್ಪ, ಅಪರ ಸರ್ಕಾರಿ ವಕೀಲರಾದ ವಿ. ಜಿ. ಪ್ರಕಾಶ್ ಗೌಡ, ಹಿರಿಯ ವಕೀಲರುಗಳಾದ ಪಿ. ಕೃಷ್ಣಮೂರ್ತಿ, ಗಂಗಾಧರ್ ಗುರುಮಠ್, ಎಸ್.ಎಂ.ರುದ್ರಮನಿ, ಕೆ.ಬಸವರಾಜ್, ಪಿ. ಜಗಧೀಶ್ ಗೌಡ್ರು, ಆರ್. ರಾಮನಗೌಡ, ಬಿ.ರೇವನಗೌಡ್ರು, ಮತ್ತಿಹಳ್ಳಿ ಅಜ್ಜಣ್ಣ, ಕೆ. ಪ್ರಕಾಶ್ , ಬಿ, ಗೋಣಿಬಸಪ್ಪ, ಬಂಡ್ರಿ, ಆನಂದ, ಮುತ್ತಿಗಿ. ರೇವಣಸಿದ್ದಪ್ಪ, ಎಂ.ಮೃ೦ತಜಯ್ಯ, ಇದ್ಲಿ ರಾಮಪ್ಪ, ಕೆ.ಎಸ್. ಮಂಜ್ಯಾನಾಯ್ಕ, ಜಿ. ಹಾಲೇಶ್, ಓ.ತಿರುಪತಿ, ಕೆ.ಕೊಟ್ರೇಶ್, , ಸಿ. ಜಾತಪ್ಪ, ಸಣ್ಣನಿಂಗನಗೌಡ, ದೊಡ್ಡಮನಿ ಪ್ರಸಾದ್, ಬಸವರಾಜ್ ಕೆ. ಶಾಂತವೀರ್ ನಾಯ್ಕ, ದೇವರಾಜ್, ಸಣ್ಣ ನಿಂಗನಗೌಡ, ಜೆ.ಸೀಮಾ, ದ್ರಾಕ್ಷಯಣಮ್ಮ, ರೇಣುಖಾ, ಮೇಟಿ, ಮದ್ದಾನಪ್ಪ ಜಾಖೀರ್, ಬಿ.ಸಿದ್ದೇಶ್, ಕೇಶವಮೂರ್ತಿ, ಬಿ.ಮಂಜುನಾಥ್, ಎ.ಮಲ್ಲಪ್ಪ. ಡಿ.ಹನುಮಂತಪ್ಪ, ಸುರೇಶ್, ಬಿ.ವಿ.ಬಸವನಗೌಡ, ಗಿರೀಶ್ ಗೌಡ, ಎಂ. ರೇವಣಸಿದ್ದಪ್ಪ, ಕಂಡ್ಯಪ್ಪ, ಬಿ.ತಿಪ್ಪೇಶ್,ಸಿದ್ದೇಶ್, ಕೊಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.