ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕ್ಯಾಡಮಿ ರಾಜ್ಯ ಸಹ ಸದಸ್ಯರಾಗಿ ರಮೇಶ ನಾಯಕ ಆಯ್ಕೆ
ಇಂಡಿ:ಲಂಬಾಣಿ ಜನಾಂಗದ ಕಲೆ, ಸಂಸ್ಕೃತಿ ,ಪರಂಪರೆ ಇಂದು ನಿನ್ನೇಯದಲ್ಲ ,ಪ್ರಾಚೀನ ಕಾಲದಿಂದಲೂ ಕೂಡಾ ಅಲೇಮಾರಿ ಜೀವನದಿಂದ ಇಂದಿಗೂ ವಿಶಿಷ್ಠ ಸಂಸ್ಕೃತಿ, ಆಚಾರ ವಿಚಾರಗಳಿಂದ ಕೂಡಿದ ಶ್ರೀಮಂತ ಸಂಸ್ಕೃತಿ.ಸರ್ಕಾರ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕ್ಯಾಡಮಿ ಸ್ಥಾಪಿಸಿರುವುದು ಸ್ವಾಗತಾರ್ಹ.
ಇಂತಹ ಭವ್ಯ ಸಂಸ್ಕೃತಿಯನ್ನು ನಮ್ಮ ಮುಂದಿನ ಪಿಳಿಗೆಗೆ ಜೀವಂತವಾಗಿರಿಸುವ ಉದ್ದೇಶದಿಂದ ಇಂಡಿ ತಾಲೂಕಿನಲ್ಲಿ ನೀವು ಸಾಹಿತಿಕ, ಸಂಸ್ಕೃತಿ, ಜಾನಪದ ಕಲೆ, ವಿಶೇಷ, ಸುಪ್ತ ಚೇತನಾ ಶಕ್ತಿ ಅಡಗಿರುವ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವರು ರಮೇಶ .ನಂದು ನಾಯಕ ಸಾ. ರಾಜನಾಳ ಎಲ್.ಟಿ ತಾಲೂಕಾ ಇಂಡಿ ಜಿ. ವಿಜಯಪೂರ ಇವರನ್ನು ಲಂಬಾಣಿ ,ಸಂಸ್ಕೃತಿ,ಭಾಷಾ ರಾಜ್ಯ ಸಹ ಸದಸ್ಯರನ್ನಾಗಿ ಸರ್ವಸದಸ್ಯರ ಸಮುಖದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಅಕ್ಯಾಡಮಿ ಅಂಗರಚನೆಯ ಅಧ್ಯಕ್ಷ ಹರೀಲಾಲ,ಖೀರು ಪವಾರ ,ಅಕ್ಯಾಡಮಿ ರಜಿಸ್ಟಾçರ್ ಈಶ್ವರ್.ಕು ಮಿರ್ಜಿ ಪ್ರಕಟಣೆಗೆ ತಿಳಿಸಿದ್ದಾರೆ.