೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಮಾನತೆ ಸಾರಿದ ಗುಂಡಗತ್ತಿ ಗ್ರಾಮ ಸಮೋಹ
ಹರಪನಹಳ್ಳಿ:ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾರಿಗೂ ಅಡಕಗೊಳಿಸಿರುವ ಸ್ವಾತಂತ್ರ‍್ಯ, ಸಮಾನತೆ, ಸಹೋದರತೆ ಎನ್ನುವ ಪದವನ್ನು ಗುಂಡಗತ್ತಿ ಗ್ರಾಮದ ಸರ್ವ ಸಮುದಾಯ ಸಮಾನತೆಯಿಂದ ಸಾರಿ ಸ್ವಾತಂತ್ರ‍್ಯ ಅಮೃತಮಹೋತ್ಸವ ಕಾರ್ಯಕ್ರಮವನ್ನು ಆದ್ದೂರಿಯಾಗಿ ನೆರವೆರಿಸಿದರು.
ತಾಲೂಕಿನ ಗುಂಡಗತ್ತಿ ಗ್ರಾಮದ ಶ್ರೀವೆಂಕಟೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಸರ್ವ ಸಮುದಾಯ ಸದಸ್ಯರುಗಳು ಹಾಗೂ ಗ್ರಾಮದ ಎಲ್ಲಾ ಹಿರಿಯ ಮತ್ತು ಕಿರಿಯ ಶಾಲೆಯ ವಿಧ್ಯಾರ್ಥಿಗಳು ಸಡಗರ ಸಂಭ್ರಮದಿ0ದ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮದ ಪ್ರಾಥಮಿಕ ಸ್ವಾಸಯ ಸಂಘದಲ್ಲಿ ಧ್ವಜಾ ರಹೋಣ ನೆರವೆರಿಸಿ ಬಳಿಕ ಗ್ರಾಮ ಪಂಚಾಯತಿ ಮುಂಭಾಗ ಸರ್ವ ಸದಸ್ಯರುಗಳು ಹಾಗೂ ಗ್ರಾಮದ ಸಮ್ಮುಖದಲ್ಲಿ ಎಲ್ಲಾ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿ ಗಳು ಶಿಸ್ತಿನ ಸಿಪಾಯಿದಂತೆ ವರ್ತಿಸಿ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮವನ್ನು ನೆರ ವೆರಿಸಿದರು.
ನಾಗರಾಜ್ ನಾಯ್ಕ ಸಿ ಪ್ರಾಸ್ತಾವಿಕ ಮಾತನಾಡಿ, ಭಾರತ ಸ್ವಾತಂತ್ರ‍್ಯ ಪಡೆಯಲು ಅನೇಕ ವೀರ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ‍್ಯವನ್ನು ತಂದುಕೊಟ್ಟರು ಅದಕ್ಕಾಗಿಯೇ ಅವರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಸ್ವಾತಂತ್ರ‍್ಯ ಆಚರಣೆ ಮಾಡಲಾಗುತ್ತದೆ.
ಸ್ವಾತಂತ್ರ‍್ಯ ದಿನದಂದು ಧೈರ್ಯ, ತ್ಯಾಗ, ಬಲಿದಾನ ಶಾಂತಿ, ಮನುಷ್ಯನ ಮತ್ತು ಪ್ರಕೃತಿ ನಡುವಿನ ಬಂಧವ್ಯವನ್ನು ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು ಹಾರಿಸುವು ದಕ್ಕೆ ವೀರ ಹೋರಾಟಗಾರರ ಪ್ರತಿಫಲವಾಗಿರುತ್ತದೆ ಎಂದು ವಿಶ್ಲೇಷಿಸಿದರು
ಈ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮಕ್ಕೆ ಶ್ರೀವೆಂಕಟೇಶ್ವರ ಪ್ರೌಡ ಶಾಲೆಯ ಶಾಲೆಯ ಅಧ್ಯಕ್ಷೆ ಉಷಾ ಕಾಶಿನಾಥ್ ಗ್ರಾ. ಪಂ. ಅಧ್ಯಕ್ಷ. ಎಂ. ಕೆಂಚಪ್ಪ, ಉಪಾಧ್ಯಕ್ಷೆ ಹಾಲಮ್ಮ,ಕರಿಯಪ್ಪ, ಕೆ.ಪ್ರಕಾಶ್, ರೋಜಾ, ಕೊಟ್ರೇಶ್,ವಿಜಯಲಕ್ಷ್ಮೀ, ಶಿವರಾಜ್, ಮಂಜಮ್ಮ, ನಾಗರಾಜ್, ಹನುಮಂತಪ್ಪ, ಗ್ರಾಮ ಮುಖಂಡರಾದ ಬಂದೋಳ್ ಮಂಜುನಾಥ್, ಮಲ್ಲಿಕಾರ್ಜುನಗೌಡ, ಚಿದಾನಂದ ಸ್ವಾಮಿ, ಷಣ್ಮುಖಪ್ಪ ಪ್ರೌಡ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ನಾಗರಾಜ್, ಶಿಕ್ಷಕರುಗಳಾದ ರುದ್ರಪ್ಪ, ಕೆಂಚಪ್ಪ, ಹನುಮಂತಪ್ಪ, ಪ್ರಭು, ಕೆ.ಸಿದ್ದಪ್ಪ, ಐ ಕೊಟ್ರೇಶ್, ಅಂಜಿನಪ್ಪ, ಕೆ. ಗಂಗಣ್ಣ, ಅಂಗಡಿ ಅಜ್ಜಣ್ಣ, ಜತಿನ್ ಕೆ.ಆರ್ಮಿ ಬಸವರಾಜ್, ಮತ್ತು ಗ್ರಾಮದ ಹಿರಿಯ ಮತ್ತು ಕಿರಿಯ ಗ್ರಾಮ ಸಾರ್ವಜನಿಕರು ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮ ದಿಂದ ಆಚರಿಸಿದರು.