ತಿರಂಗಾ ದೇಶಾಭಿಮಾನ ಮೂಡಿಸಿದೆ: ದಯಾಸಾಗರ ಪಾಟೀಲ
ಇಂಡಿ:೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಮನೆ ಮನೆ ತಿರಂಗಾ ಪ್ರತಿ ಭಾರತೀಯರ ಹೃದಯದಲ್ಲಿ ದೇಶಾಭಿಮಾನ, ಸ್ವಾಭಿಮಾನದ ಕಿಚ್ಚು ಹತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ತಾಲೂಕಿನ ಹಿಂಗಣಿ ಗ್ರಾಮದಲ್ಲಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ದಯಾಸಾಗರ ಪಾಟೀಲ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ನಿಮಿತ್ಯ ಗ್ರಾಸ್ಥರಿಗೆ ಧ್ವಜ ಹಾಗೂ ಕೇಂದ್ರ ಸರಕಾರದ ಜನಪರ ಯೋಜನೆಗಳ ಕುರಿತು ಭೀತಿ ಪತ್ರ ವಿತರಣೆ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಡಳಿತ ಅವಧಿ ಯಲ್ಲಿ ದೇಶಾಭಿಮಾನ ಜೊತೆ ಇಡೀ ಭಾರತೀಯರಿಗೆ ಆತ್ಮಸ್ಥೆರ್ಯ ತುಂಬಿದ್ದಾರೆ.
ಕೇಂದ್ರ ಸರಕಾರ ಬಡವರ ದೀನದರ್ಬಲರ ಪರವಾಗಿ ಅನೇಕ ಯೋಜನೆಗಳು ಜಾರಿಗೋಳಿಸಿವೆ ಇಂತಹ ಯೋಜನೆಗಳ ಬಗ್ಗೆ ಪ್ರತಿ ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
