ಶ್ರೀಭೀರಲಿಂಗೇಶ್ವರ ಪವಾಡ ಪುರುಷ:  ಬಿ.ಡಿ ಪಾಟೀಲ
ಇಂಡಿ:ಶ್ರೀಭೀರಲಿಂಗೇಶ್ವರ, ಅಮೋಘಸಿದ್ದರು ಪವಾಡ ಪುರುಷರಾಗಿದ್ದು ಬೇಡಿದವರಿಗೆ ಇಷ್ಠಾರ್ಥಿಯನ್ನು ಪೂರೈಸುವದಿವ್ಯಚೇತನ ಎಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣದ ಗ್ರಾಮದಲ್ಲಿ ಶ್ರೀಭೀರಲಿಂಗೇಶ್ವರ ಜಾತ್ರಾಮಹೋತ್ಸವ ಹಾಗೂ ಶ್ರೀಅಮೋಘಸಿದ್ದೇಶ್ವರ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನತೆ ಹೃದಯವಂತರಾಗಿದ್ದು ಎಲ್ಲ ಸಮುದಾಯವನ್ನು ಪ್ರೀತಿಸುವ ಗುಣ ಅವರಲ್ಲಿದೆ. ಭಾರತದ ಸಂಸ್ಕೃತಿ ಪರಂಪರೆ ಗ್ರಾಮೀಣ ಭಾಗದಲ್ಲಿ ಜೀವಂತವಾಗಿವೆ.
ಪ್ರಾಚೀನ ಕಾಲದ ನಮ್ಮ ಪೂರ್ವಜರ ಕಲೆ, ಸಂಸ್ಕೃತಿ, ಜಾನಪದ ,ಆಟ, ನಾಟಕಗಳು ಉಳಿಸಬೇಕಾಗಿರುವುದು ಪ್ರತಿಯೋಬ್ಬರ ಕರ್ತವ್ಯ, ಜಾತ್ರೆ ಹಬ್ಬ ಹರಿದಿನಗಳು ಮಾಡು ವದರಿಂದ ಭಾವೈಕ್ಯತೆ ಮೂಡುತ್ತದೆ. ಇಂಡಿ ತಾಲೂಕಿನಾದ್ಯೆಂತ ಅನೇಕ ಧಾರ್ಮಿಕ ಪುಣ್ಯ ,ಪುರುಷರು ಸಾಧು ಸಂತರು ಜನಿಸಿ ಈ ಭಾಗದ ಜನತೆಗೆ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿದ್ದಾರೆ.
ಮಹಾನ್ ದಾರ್ಶನಿಕರು ನೀಡಿದ ತತ್ವ ಸಂದೇಶಗಳ ಜೀವನ ಪರ್ಯಂತರ ಅಳವಡಿಸಿ ಕೊಂಡು ಹೋದರೆ ಸಾರ್ಥಕವಾಗುತ್ತದೆ ಎಂದರು.
ಗ್ರಾ.ಪಂ ಅದ್ಯಕ್ಷ ರಾಜು ನಧಾಪ, ಹಿರಗಪ್ಪ ಎಳಮೇಲಿ, ಯಶವಂತ ಬಿರಾದಾರ, ಸಿದ್ದು ಡಂಗಾ, ಅಶೋಕಗೌಡ ಪಾಟೀಲ, ರಮೇಶ ರಾಠೋಡ, ಮಹಾದೇವ ವಾಲೀಕಾರ, ಗುರುನಾಥ ಮುಜಗೊಂಡ , ಹುಲ್ಲಪ್ಪ ಯಳಮೇಲಿ, ಚಂದು ಯಳಮೇಲಿ, ಸುರೇಶ ಯಳಮೇಲಿ, ಪ್ರವೀಣ ಕಾಗವಾಡ, ಹಿರಗಪ್ಪ ಎಳಮೇಲಿ, ಹಣಮಂತ ಕಾಗವಾಡ ,ವೀರಭದ್ರ ವಾಘಮೋರೆ ಇದ್ದರು.