ಶಿಕ್ಷಕ ಜ್ಞಾನ ನೀಡುವ ದಾಸೋಹ ಮೋರ್ತಿ: ಸಿ.ಇ.ಓ ರಾಹುಲ್ ಸಿಂಧೆ
ಇಂಡಿ:ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ ಭೇಟಿ ನೀಡಿದರು.
ಶಿಕ್ಷಕರು ಮಕ್ಕಳಿಗೆ ಜ್ಞಾನದ ಹಸಿವನ್ನು ಹೋಗಲಾಡಿಸುವ ದಾಸೋಹಿ ಮೋರ್ತಿ ಗಳೆಂದರೆ ತಪ್ಪಾಗದು . ಶಿಕ್ಷಕರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಇದೆ ತಮ್ಮ ಸನ್ನಡತೆ ,ಉದ್ಧಾತ ವಿಚಾರಗಳು ಸಮಾಜ ನಿಮ್ಮನ್ನು ಸದಾ ಖುಣಿಯಾಗಿರುತ್ತದೆ. ಶಿಷ್ಯ ಗುರುವಿಗೆ ಮೀರಿಸುವಂತಹ ಶಿಕ್ಷಣ ನೀಡಿ ಒಬ್ಬ ಒಳ್ಳೆಯ ಗುರು ತನ್ನ ಶಿಷ್ಯ ಉನ್ನತ ಮಟ್ಟ ದಲ್ಲಿದ್ದಾಗ ಪಡುವ ಸಂತೋಷ ಅಷ್ಠೀಷ್ಠಲ್ಲ ಇಂದು ಶೈಕ್ಷಣಿಕ ಪ್ರಗತಿಗೆ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಮಾಡಿವೆ.
ಸ್ಥಳೀಯ ಗ್ರಾಮ ಪಂಚಯತ ಸ್ಮಾರ್ಟ ಕ್ಲಾಸ್ ಅಳವಡಿಸಿದೆ ಸ್ಥಳೀಯ ಸಂಸ್ಥೆಗಳು ಇಂತಹ ಗುಣಾತ್ಮಕ ಕೆಲಸಗಳು ಮಾಡಿರುವುದು ಸ್ವಾಗತಾರ್ಹ ತಂತ್ರಜ್ಞಾನ ಶಿಕ್ಷಣ ಮಕ್ಕಳ ಪ್ರಗತಿಗೆ ಸಹಕಾರವಾಗಲಿ ಎಂದು ಹಾರೈಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದೀನ, ಚಡಚಣ ತಾ.ಪಂ ಅಧಿಕಾರಿ ಸಂಜೇಯ ಖಡಗೇಕರ್, ಶಿಕ್ಷಕ ಜಿ.ಡಿ ಜಾಧವ, ಸುರೇಶ ಅಂಕಲಗಿ, ಅನೀಲ ಪತಂಗಿ, ಸಂತೋಷ ಬಂಡೆ, ಎಸ್.ಎಂ ಪಂಚಮುಖಿ ಸೇರಿದಂತೆ ಅನೇಕ ಶಿಕ್ಷಕರಿದ್ದರು.