ಮಹಾತ್ಮರ ಭರವಸೆ ಈಡೇರಿಸುವದು ಸರಕಾರಗಳ ಕರ್ತವ್ಯ
ಇಂಡಿ:ಪ್ರಭುದ್ದ ಭಾರತ ಕಟ್ಟುವ ಕನಸ್ಸು ನಮ್ಮ ಪೂರ್ವಜರದಾಗಿತ್ತು. ಇಂತಹ ಮಹಾತ್ಮರ ಭರವಸೆ ಈಡೇರಿಸುವದು ಸರಕಾರಗಳ ಕರ್ತವ್ಯ. ಕಳೆದ ೨-೩ ವರ್ಷಗಳಿಂದ ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಕೋವಿಡ್-೧೯ ಇಡೀ ವಿಶ್ವವನ್ನೆತಲ್ಲಣ ಗೋಳಿಸಿದೆ.
ಒಂದು ಕಡೆ ಅತೀವೃಷ್ಠಿ ಇನ್ನೋಂದು ಕಡೆ ಅನಾವೃಷ್ಠಿ .ಪ್ರಕೃತಿವಿಕೋಪಗಳು ಇಷ್ಠೇಲ್ಲಾ ಸಂಕಷ್ಟಗಳ ಮಧ್ಯ ಭಾರತ ಅಭಿವೃದ್ದಿಯತ್ತ್ ದಾಪುಗಾಲು ಹಾಕುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ೭೫ನೇ ಅಮೃತ ಮಹೋತ್ಸವದ ಧ್ವಜಾರೋಹಣ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೇಶದ ಹಿಂದಿನ ಪ್ರಧಾನ ಮಂತ್ರಿ ಗಳಾದ ಶ್ರೀಮತಿ ಇಂಧಿರಾಗಾAಧಿಜೀಯವರು ಗರೀಬಿ ಹಟಾವೋ, ಬ್ಯಾಂಕುಗಳ ರಾಷ್ಟಿçÃಕರಣ, ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಪ್ರಗತಿಗೆ ಶ್ರಮಿಸಿ ದ್ದಾರೆ.
ನಂತರ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯ್‌ಯವರು ದೇಶದ ರಸ್ತೆಗಳ ಸುಧಾರಣೆಗಾಗಿ ಚತುಷ್ಠತ ರಸ್ತೆ ಅಭಿವೃದ್ದಿ ಪಡಿಸಿದ್ದಾರೆ . ರೈತರ ಹಿತಚಿಂತನೆ ಮತ್ತು ಸಮಗ್ರ ನೀರಾವರಿ ಯೋಜನೆಯ ಮಾಡುವ ಉದ್ದೇಶದಿಂದ ನದಿಗಳ ಜೋಡಣೆ ಮಾಡುವ ಕನಸ್ಸು ಅವರದಾಗಿತ್ತು. ಇಂತಹ ದೂರದೃಷ್ಠಿ ನಾಯಕರ ಕನಸ್ಸು ಸಹಕಾರಗೋಳಿಸುವಲ್ಲಿ ಸರಕಾರಗಳು ಶ್ರಮಿಸಬೇಕು ಅಂದಾಗ ಮಾತ್ರ ಇವರನ್ನು ಗೌರವಿಸಿದಂತಾಗುತ್ತದೆ ಎಂದರು.
ರೈತ,ಸೈನಿಕ ಎರಡು ವರ್ಗಗಳು ಅತ್ಯೆಂತ ಶ್ರೇಷ್ಠರು ಅದಕ್ಕಾಗಿಯೇ ಜೈ,ಜವಾನ್ ಜೈ ಕೀಸಾನ್ ಎಂಬ ಘೋಷಣೆ ಮೋಳಗಿದೆ.ತಾಲೂಕಿನಲ್ಲಿ ನೀರಾವರಿ ಯೋಜನೆಗಳು ನೀರಾವರಿ ಯೋಜನೆಯ, ಯೋಜಿತ ಪ್ರದೇಶದ ಕೊನೆಯವರೆಗೂ ನೀರು ತಲುಪಿಲ್ಲ ಹೀಗಾಗಿ ಈ ಭಾಗದ ರೈತರು ಕಷ್ಟದಲ್ಲಿದ್ದಾರೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅಂತಿಮ ಹಂತದಲ್ಲಿದ್ದು ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ನೀರಾವರಿ ಸಚಿವರನ್ನು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಕಳೆದ ಬಾರಿ ಎಸ್.ಎಸ್ ಎಲ್,ಸಿ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳು ರಾಜ್ಯದಲ್ಲಿಯೇ ಒಂದನೆ ಸ್ಥಾನ ಪಡೇದುಕೊಂಡಿರುವುದು ಹೆಮ್ಮೆಯ ವಿಷಯ ಮುಂಬರುವ ವರ್ಷಗಳಲ್ಲಿ ಕೂಡಾ ವಿಧ್ಯಾರ್ಥಿಗಳು ಹೆಚ್ಚಿನ ಫಲಿತಾಂಶ ಪಡೇದು ಜಿಲ್ಲೆಯ ಹೆಸರು ತರಬೇಕು.
ತಾಲೂಕಿನ ರೈತರು ಲಿಂಬೆ ಬೆಳೆಯುವುದರಲ್ಲಿ ರಾಜ್ಯ ,ವಿದೇಶ ಮಟ್ಟದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಹೀಗಾಗಿ ಲಿಂಬೆ ಬೆಳೆಯುವ ರೈತರಿಗೆ ಒಳ್ಳೆಯ ಸ್ಥಾನ ಮಾನ ಸಿಗಲಿ ಎಂಬ ಉದ್ದೇಶದಿಂದ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪಿಸಲಾಗಿದೆ. ನನ್ನ ಆಡಳಿತ ಅವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಸಾಕಷ್ಟು ಶ್ರಮಿಸಿದ್ದೇನೆ.
ಮುಂಬರುವ ದಿನಗಳಲ್ಲಿ ಕರ್ನಾಟಕ ಸರಕಾರ ಜಿಲ್ಲೆ ಮಾಡುವ ಸಂಕಲ್ಪ ಬಂದರೆ ಇಂಡಿ ಪ್ರಥಮ ಆದ್ಯತೆ ನೀಡುವಂತೆ ಅಭಿವೃದ್ದಿಪಡಿಸಿರುತ್ತೇನೆ. ಅನೇಕ ಯುವ ಸಮುದಾಯ ಉದ್ಯೋಗ ಬೇಕಾಗಿದೆ ಹೀಗಾಗಿ ಬೂದಿಹಾಳ ಹತ್ತೀರ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಮುಂಚೂಣಿಯಲ್ಲಿ ಕೆಲಸ ಮಾಡುತ್ತೇನೆ.ಮುಂಬರುವ ದಿನಗಳಲ್ಲಿ ನಗರ ಸುಧಾರಣೆ, ನಗರದ ಒಳರಸ್ತೆಗಳು, ಉದ್ಯಾನವನಗಳು ,ಅರಣ್ಯಗಳ ಬೆಳೆಸುವುದು, ಪಕ್ಷಿ ಸಂಕುಲಗಳ ಉಳಿವು ಇಂತಹ ಅನೇಕ ಕೆಲಸಗಳು ಮಾಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ ನಾಗಯ್ಯಾ ಹಿರೇಮಠ, ತಾ.ಪಂ ಅಧಿಕಾರಿ ಸುನೀಲ ಮದ್ದಿನ, ಡಿವೈಎಸ್ಪಿ ಚಂದ್ರಕಾ೦ತ ನಂದರಡ್ಡಿ,ಪುರಸಭೆ ಅಧ್ಯಕ್ಷ ಬನ್ನೇಮ್ಮಾ ಹದರಿ, ಬಿ.ಇ.ಓ ವಸಂತ ರಾಠೋಡ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಲಕ್ಷಿö್ಮÃಶ, ತೋಟಗಾರಿಕಾಧಿಕಾರಿ ಎಸ್.ಎಸ್ ಹಿರೇಮಠ, ಹೆಸ್ಕಾಂ ಅಧಿಕಾರಿ ಮೆಡೇದಾರ, ಕೃಷಿ ಅಧಿಕಾರಿ ಎಸ್.ಎಂ ಇನಾಮದಾರ , ಡಾ. ಅರ್ಚನಾ ಕುಲಕರ್ಣಿ ಸೇರಿದಂತೆ ತಾಲೂಕಾಧಿಕಾರಿಗಳು ಇದ್ದರು.