ಜೆಡಿಎಸ್ ನಿಂದ ಸಂಭಾವ್ಯ ಆಭ್ಯರ್ಥಿ ಎಂದು ಪ್ರತಿಕ್ರಿಯೆ ನೀಡಿದ ಅಮರೇಶ್ ನಾಯ್ಕ್
ಯಾರಿಗೆ ಸಿಗುತ್ತೆ ತೆನೆಹೊತ್ತ ಮಹಿಳೆಯ ಪಟ್ಟ ..
ಲಿಂಗಸುಗೂರ:ಮುಂಬರುವ 2023 ರ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾವು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಜೆಡಿಎಸ್ ನಿಂದ ಈಗಾಗಲೇ ಸಿದ್ದು ಬಂಡಿ ಖಚಿತ ಅಭ್ಯರ್ಥಿ ಎಂಬುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ ಆಗಿತ್ತು ..ಇಂತಹ ಸಮಯದಲ್ಲಿ ಪೈಪೋಟಿಯಾಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಚಾರವನ್ನು ನಡೆಸಿ ಈಗಾಗಲೇ ಜೆಡಿಎಸ್ ನಿಂದ ಅಮರೇಶ್ ನಾಯ್ಕ್ ಅವರು ನಾನು ಸಹ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಸಹ ಮುಂದಿನ ಸೇವಾಕಾಂಕ್ಷಿ ಆಗಿದ್ದೇನೆ.
ಹಿಂದೆ ಸರಿಯುವ ಮಾತಿಲ್ಲ .ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನು ವಂತಹ ಭರವಸೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ …ಬಂಜಾರ್ ಸಮುದಾಯದ ಅಮರೇಶ ನಾಯ್ಕ್ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಸಂಚಾರವನ್ನು ನಡೆಸಿದ್ದಾರೆ…ಜನಗಳ ಉತ್ತಮ ಪ್ರತಿಕ್ರಿಯೆ ಸಹ ಬರುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿ ಇನ್ನಷ್ಟು ಚುರುಕಿನ ಕೆಲಸವನ್ನ ಮಾಡಲು ಮುಂದಾಗುತ್ತೇನೆ ..ಅಷ್ಟೇ ಅಲ್ಲದೆ ಈ ಬಾರಿ ಜನ ಹೊಸ ಮುಖಕ್ಕೆ ಹೊಸ ಸಮುದಾಯಕ್ಕೆ ಈ ಬಾರಿ ಅವಕಾಶವನ್ನು ನೀಡುತ್ತಾರೆ ಎನ್ನುವ ಭರವಸೆ ಇದೆ.. ಜನ ಸಹ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.. ಎನ್ನುವಂತಹ ಪ್ರತಿಕ್ರಿಯೆಯನ್ನು ನೀಡಿದ್ದಾರೆ.