ಜೆ.ಡಿ.ಎಸ್ ಪಕ್ಷ ತಾಲೂಕಿನಾದ್ಯಂತ ಬಲವರ್ಧನೆಯಾಗಿದೆ
ಇಂಡಿ:ಜೆ.ಡಿ.ಎಸ್ ಪಕ್ಷ ತಾಲೂಕಿನಾದ್ಯೆಂತ ಬಲವರ್ಧನೆಯಾಗಿದೆ. ಇದಕ್ಕೆಲ್ಲ ತೆರೆ ಮೇರೆಯ ಹಿಂದೆ ಇಂತಹ ಅನೇಕ ಗಣ್ಯ ನಾಯಕರ ಆರ್ಶೀವಾದ ಎಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.
ಪಟ್ಟಣದ ಅಮರ ಇಂಟರ್ ನ್ಯಾಶನಲ್ ಹೋಟೇಲ್ ಆವರಣದಲ್ಲಿ ಜೆ.ಡಿ.ಎಸ್ ಕಾರ್ಯ ಕರ್ತರು ಹಾಗೂ ಮರೇಪ್ಪ ಗಿರಣಿವಡ್ಡರ ಅಭಿಮಾನಿಗಳು ಆಯೋಜಿಸಿದ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ರಾಜ್ಯ ವರಿಷ್ಠರಾದ ದೇವೇ ಗೌಡರು ಬಡವರ, ದೀನ ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇಂದು ಮರೇಪ್ಪ ಗಿರಣಿವಡ್ಡರ ಈ ಪಕ್ಷಕ್ಕೆ ಬರಲು ನನ್ನ ಬಳಿ ಹಣ ,ಸಂಪತ್ತು ನೋಡಿ ಬಂದಿಲ್ಲಾ ನಾನೋಬ್ಬ ಬಡಪಾಯಿ ನೈಯಾ ಪೈಸ್ ನನ್ನಲ್ಲಿ ಇಲ್ಲ, ಕೇವಲ ಬಡವರ ಧ್ವನಿಯಾಗಿ ವಿಧ್ಯಾರ್ಥಿ ಜೀವನದಿಂದ ಬಂದಿರುವೆ. ಇಂತಹ ಪುಣ್ಯಾತ್ಮರು ನನಗೆ ಬೆಂಬಲವಿರುವು ದರಿ0ದ ದೇವರು ಇವರಿಗೆ ಸುದಿರ್ಘ ಆರೋಗ್ಯ, ಸಂಪತ್ತು ಕೊಟ್ಟು ಕರುಣಿಸಲಿ ಎಂದು ಶುಭ ಹಾರೈಸಿದರು.
ಜೆ.ಡಿ.ಎಸ್ ಮುಖಂಡ ಮರೇಪ್ಪ ಗಿರಣಿವಡ್ಡರ ಮಾತನಾಡಿ ನಾನು ಎಂದಿಗೂ ಹುಟ್ಟು ಹಬ್ಬ ಆಚರಿಸಿಕೊಂಡವನ್ನಲ್ಲ ನನ್ನ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಆಚರಣೆ ಮಾಡಿಕೊಳ್ಳಲು ಒಪ್ಪಿದ್ದೇನೆ. ಜೀವನದಲ್ಲಿ ಯಾವುದೂ ಶಾಶ್ವತ ಇಲ್ಲ.  ಇರುವ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡೋಣ .ಬಿ.ಡಿ ಪಾಟೀಲ ಸರಳ , ಸಜ್ಜನ ವ್ಯಕ್ತಿ ಬಡವರನ್ನು ಕಷ್ಟದಲ್ಲಿ ಇದ್ದವರನ್ನು ಕಂಡು ಕಣ್ಣಿರು ಹಾಕುತ್ತಾರೆ ಇವರೋಬ್ಬ ಹೃದಯವಂತ ವ್ಯಕ್ತಿ ಎಂದು ನಂಬಿರುವೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನತೆ ಆಶೀವಾದ ಮಾಡಬೇಕು ಎಂದು ಕೈಮುಗಿದು ಬೇಡಿಕೊಂಡರು.
ಅಯುಬ ನಾಟೀಕಾರ, ಮಹಿಬೂಬ ಬೇನೂರ, ಜಗು ಕುಂಬಾರ, ಅಪ್ಪಾಸಾಹೇಬ ಪವಾರ ಸೇರಿದಂತೆ ಅನೇಕರು ಇದ್ದರು.