ಶಾಸಕರ ನಡೆ ಹಳ್ಳಿಯ ಕಡೆ ರಾಜಕೀಯ ಪ್ರೇರಿತ : ಶಶಿಧರ್ ಪೂಜಾರ್ ಆಗ್ರಹ
ಹರಪನಹಳ್ಳಿ:ಶಾಸಕ ಜಿ. ಕರುಣಾಕರ ರೆಡ್ಡಿಯವರು ೪ ವರ್ಷದ ೫ ತಿಂಗಳಗಳ ಕಾಲ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಸ್ಪಂಧಿಸದೇ ಇರುವ ಶಾಸಕರು ಈಗ ಏಕಾಏಕಿ ಶಾಸಕರು ತಾಲೂಕಿನ ಜನರ ಬಗ್ಗೆ ಕಾಳಜಿ ತೋರುತ್ತಿರುವುದು ಬರೇ ರಾಜಕೀಯಪ್ರೇರಿತವೇ ಹೊರತು ಕ್ಷೇತ್ರದ ಅಭಿವೃದ್ದಿಗಲ್ಲಾ ಎಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾದ ಶಶಿಧರ್ ಪೂಜಾರ್ ಶಾಸಕರ ವಿರುದ್ಧ ಕಿಡಿಕಾರಿದರು.
ಪಟ್ಟಣದ ಹಳೇ ಬಸ್ಸ್ ನಿಲ್ದಾಣದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಸಕರ ನಡೆ ಹಳ್ಳಿಯ ಕಡೆ ಬರೇ ನೆಪಮಾತ್ರ ತಾಲೂಕಿನ ಮತದಾರರು ಶಾಸಕ ಜಿ. ಕರುಣಾಕ ರೆಡ್ಡಿಯವರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತೀದ್ದಾರೆ ಅವರಿಗೆ ಈಗ ಚುನಾವಣೆ ಹತ್ತಿರಬರುವಾಗ ಶಾಸಕ ರಿಗೆ ತಾಲೂಕಿನ ಮತದಾರರು ನೆನಪಾಗುತ್ತಾರೆ ಎಂದು ಶಾಸಕರ ವಿರುದ್ದ ವ್ಯಂಗ್ಯವಾಡಿ ದರು.
ತಾಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ ತಾಲೂಕಿನ ಚೆನ್ನಹಳ್ಳಿ ತಾಂಡ, ಹಾರಕನಾಳು ತಾಂಡದ, ಲಕ್ಷಿö್ಮÃಪುರ, ಜಂಭುಲಿAಗನಹಳ್ಳಿ, ಕೂಲಹಳ್ಳಿ , ಕೋಡಿಹಳ್ಳಿ , ಮಾಡಲಗೇರಿ ಗ್ರಾಮಗಳ ರಸ್ತೆಗಳು ಕಳಪೆಯಾಗಿದೆ, ಆದರೂ ಶಾಸಕರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದೇ ತಾಲೂಕಿನ ಜನರಿಗೆ ದಾರಿತಪ್ಪಿಸುವಂತಹ ಕೆಲಸ ಮಾಡುತ್ತೀದ್ದಾರೆ. ಶಾಸಕರಿಗೆ ತಾಲೂಕಿನ ಮತದಾ ರರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುವ ಸಮಯ ಹತ್ತಿರ ಬಂದಿದೆ ಎಂದರು.
ನಾಲ್ಕುವರೆ ವರ್ಷಗಳ ಕಾಲ ನಾಪತ್ತೆಯಾಗಿದ್ದ ಶಾಸಕರು ಈಗ ಏಕಾಏಕಿ ಶಾಸಕರ ನಡೆ ಹಳ್ಳಿಯ ಕಡೆ ಎನ್ನುವುದು ಬರೇ ನಾಟಕ ಶಾಸಕರು ತಮ್ಮ ಆಡಳಿತದ ಅವಧಿಯಲ್ಲಿ ತಾಲೂಕಿಗೆ ಎಷ್ಟು ಗೃಹ ನಿವೇಶನಗಳನ್ನು ಮಂಜೂರು ಮಾಡಿಸಿದ್ದಾರೆ. ಎಷ್ಟು ಗೃಹ ನಿವೇಶನವನ್ನು ತಾಲೂಕಿನ ಬಡ ಜನರಿಗೆ ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂಬುವುದನ್ನು ಖಚಿತ ಪಡಿಸಲಿ ?