ಗುಡಿಗುಂಡಾರ ಕಟ್ಟಿ ಕೈಚಾಚುವ ಪರಸ್ಥಿತಿ ಬಂದಿರುವುದು ವಿಷಾದನೀಯ: ಕೆ.ಪಿ.ನಂಜುಂಡಿ
ಇಂಡಿ:ವಿಶ್ವಕರ್ಮ ಸಮುದಾಯಕ್ಕೆ ತನ್ನದೆಯಾದ ಇತಿಹಾಸವಿದೆ ಗುಡಿ-ಗುಂಡಾರ,ಶಿಲ್ಪಕಲೆ. ಕಸೂತಿ ದೇಶದ ಸಂಸ್ಕೃತಿ ಪರಂಪರೆ ಹೊಸ ವಿಧದ ಅವಿಸ್ಕಾರಕ್ಕೆ ನಮ್ಮ ಸಮಾಜದ ಕೊಡುಗೆ ಸಾಕಷ್ಟು. ಗುಡಿ ಗಂಡಾರ ಕಟ್ಟಿ ಕೈ ಚಾಚುವ ಪರಸ್ಥಿತಿ ಬಂದಿರುವುದು ವಿಷಾದನೀಯ ಸಂಗತಿ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜಾಧ್ಯಕ್ಷ ಹಾಗೂ ವಿಧಾನ ಪರಿಷ್ಯತ ಸದಸ್ಯ ಕೆ.ಪಿ ನಂಜುಂಡಿ ಹೇಳಿದರು.
ನಗರದ ಶಂಕರ ಪಾರ್ವತಿ ಭವನದಲ್ಲಿ ವಿಶ್ವಕರ್ಮ ಸಮುದಾಯದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಕುಲಬಾಂಧವರು ನನಗೆ ಸುಮಾರು ೨ ಕಿಮೀ ಪ್ರಮುಖ ರಸ್ತೆಗಳಲ್ಲಿ ತೇರೆದ ವಾಹನದಲ್ಲಿ ಮೇರವಣಿಗೆ ಮಾಡಿ ಗೌರವಿಸಿರುವು ದರಿಂದ ಸಮಾಜದ ಋಣ ಜೀವನದ ಕೊನೆ ಉಸಿರು ಇರುವವರೆಗೂ ಮರೆಯುವುದಿಲ್ಲ. ನಾನು ನನ್ನ ಜೀವನದ ೨೪ ವರ್ಷಗಳ ಸುಧಿರ್ಘ ಹೋರಾಟ ಸಮಾಜಕ್ಕಾಗಿ ಮಾಡಿರುವೆ ವಿನಹ: ಸ್ವಂತಿಕೆಗೆ ಅಲ್ಲ. ವಿಶ್ವಕರ್ಮ ಸಮಾಜದ ಅಮರ ಶಿಲ್ಪಿ ಜಕಣಾ ಚಾರ್ಯರ ಜಯಂತಿ .ಪ್ರತ್ಯೇಕ ವಿಶ್ವಕರ್ಮ ನಿಗಮ ಸ್ಥಾಪಿಸಲು ಶಕ್ತಿ ಮೀರಿ ಪ್ರಮಾಣಿಕ ಪ್ರಯತ್ನ ಮಾಡಿರುವೆ.
ಎಸ್ಟಿ ಮಿಸಲಾತಿ ನಾವು ಯಾರಿದಂಲೂ ಕಿತ್ತುಕೊಳ್ಳುತ್ತಿಲ್ಲ, ಮಿಸಲಾತಿ ಸಂವಿಧಾನ ಬದ್ದ ನಮ್ಮ ಹಕ್ಕು , ರಾಜಮಹಾರಾಜರ ಕಾಲದಲ್ಲಿ ಕುಲ ಕಸಬುದಾರರಿಗೆ ರಾಜಾಶ್ರಯ ನೀಡುತ್ತಿದ್ದರು ಇಂದು ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ ವರು ಸಂವಿಧಾನ ಬದ್ದವಾಗಿ ಮೀಸಲಾತಿ ನೀಡಬೇಕು ಎಂಬ ಸದಾಶೇಯವಾಗಿದೆ .ಮಿಸಲಾತಿ ಕೂಡಾ ಒಂದು ರಾಜಾ ಶ್ರವಿದ್ದಂತೆ ಮಿಸಲಾತಿ ಇದ್ದರೆ ಮಾತ್ರ ನಮ್ಮ ಕುಲಕಸಬುಗಳು ಉಳಿಯುತ್ತವೆ ಇಲ್ಲದಿದ್ದರೆ ನಾಶವಾಗುತ್ತವೆ.
ಸರಕಾರ ಎಸ್ಟಿ ಮಿಸಲಾತಿ ಕೊಟ್ಟರೆ ಆರ್ಥಿಕ,ಸಾಮಾಜಿಕ ,ಶೈಕ್ಷಣಿಕ ,ರಾಜಕೀಯ ಅಭಿವೃದ್ದಿ ಹೊಂದಲು ಸಾಧ್ಯ. ಒಂದು ವೇಳೆ ಮಿಸಲಾತಿ ಸಿಗದಿದ್ದರೆ ಕರ್ನಾಟಕ ರಾಜ್ಯದಲ್ಲಿ ಒಬ್ಬನೆ ಒಬ್ಬನ್ನು ಶಾಸಕನಾಗುವುದಿಲ್ಲ. ಸಮಾಜ ಒಬ್ಬ ವ್ಯಕ್ತಿಯಿಂದ ಅಲ್ಲ ಸಮಾಜ ಸಮುದ್ರ ಇದ್ದ ಹಾಗೆ . ಮೂಢ ನಂಬಿಕೆ ಬಿಡಿ ಸಂವಿಧಾನ ಅರ್ಥ ಮಾಡಿಕೊಳ್ಳದಿದ್ದರೆ ನಿಮ್ಮ ಅಸ್ಥಿತ್ವ ಇಲ್ಲ. ಸಮಾಜದ ಕುಲ ಬಾಂಧವರು ಒಗ್ಗಟ್ಟಾಗಿ ಎಸ್ಟಿ ಮಿಸಲಾತಿ ಸಿಗುವವರೆಗೂ ಹೋರಾಟ ಮಾಡಿ ನನಗಾಗಿ ಅಲ್ಲ ನನ್ನ ಮಕ್ಕಳು ವಿದೇಶದಲ್ಲಿದ್ದಾರೆ ನನ್ನ ರಕ್ತ ಹೇಳುತ್ತೇ ಸಮಾಜಕ್ಕಾಗಿ ಏನಾದರೂ ಮಾಡಿ ಎಂದು ನಾನು ವಿಶ್ರಾಂತಿ ಪಡೆಯದೆ ಮಿಸಲಾತಿ ಸಿಗುವವರೆಗೂ ಹೋರಾಟ ಮಾಡುತ್ತೇನೆ ನನ್ನ ಜೊತೆ ನೀವು ಸದಾ ಹೋರಾಟದಲ್ಲಿ ಪಾಲ್ಗೋಳ್ಳಿ ಎಂದು ಸಮಾಜ ಬಾಂಧವರಿಗೆ ವಿನಂತಿಸಿದರು.***ಮಿಸಲಾತಿ ಎನ್ನುವುದು ಸಂವಿಧಾನ ಬದ್ದ ಹಕ್ಕು. ನಮ್ಮ ಮುಂಬರುವ ಪಿಳಿಗೆಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಉಳಿವಿಗಾಗಿ ಎಸ್ಟಿ ಮೀಸಲಾತಿ ಸರಕಾರ ಕೊಡಬೇಕು. ಒಂದು ವೆಳೆ ಮಿಸಲಾತಿ ಕೊಡದಿದ್ದರೆ ಹೋರಾಟದ ಹಾದಿ ಹಿಡಿದು ರಾಜ್ಯಾದ್ಯೆಂತ ಪ್ರತಿಭಟನೆ ಮಾಡಲಾಗುವುದು.ವಿಶ್ವಕರ್ಮ ತಾಲೂಕಾ ಅಧ್ಯಕ್ಷ ರಮೇಶ ಪೋದ್ದಾರ.
ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭೆ ಉಪಾಧ್ಯಕ್ಷ ಪ್ರಮೋದ ಬಡಿಗೇರ, ಬಾಳು ಗಿರಿಗಾಂವ್, ವಿಜಯಕುಮಾರ ಸೋನಾರ, ರಮೇಶ ಪೂದ್ದಾರ, ಗಂಗಾಧರ ಬಡಿಗೇರ, ಭೀಮರಾಯ ಬಡಿಗೇರ, ಸುಜೀತ ಲಾಳಸಂಗಿ, ರೇವಪ್ಪ ಪತ್ತಾರ, ಅನೀಲಗೌಡ ಬಿರಾದಾರ, ಪ್ರದೀಪ ಗಿರಿಗಾಂವಕರ್, ಪ್ರಮೋದ ಬಡಿಗೇರ, ಆರ್,ಡಿ ಪೋದ್ದಾರ, ಎಸ್.ಪಿ ಮಾಯಾಚಾರಿ, ರತ್ನಕಲಾ ಪೋದ್ದಾರ, ಉಮೇಶ ಪತ್ತಾರ, ಭಾರತಿ ಠಂಕಸಾಲಿ ರಾಜು ಬಡಿಗೇರ, ಗಂಗಾಧರ ಬಡಿಗೇರ,ವೇದಿಕೆ ಯಲ್ಲಿದ್ದರು.
ವಿಶಾಲ ಬಡಿಗೇರ, ಸುಜೀತಕುಮಾರ ಲಾಳಸಂಗಿ, ರಮೇಶ ಪೋದ್ದಾರ, ಪ್ರವೀಣ ಪೋದ್ದಾರ,ವಿಠ್ಠಲ ಚಿಕ್ಕಬೇನೂರ, ವಿಠ್ಠಲ ಬಡಿಗೇರ, ರಾಜಶೇಖರ ಬಡಿಗೇರ ,ಮಹಾದೇವ ಪತ್ತಾರ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು,ಗಣ್ಯರು ಇದ್ದರು.