ಬಸವೇಶ್ವರರ ಆಶೀರ್ವಾದ ನನ್ನ ಮೇಲಿದೆ, ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಶಾಸಕ ಪಾಟೀಲ
ಬಸವನಬಾಗೇವಾಡಿ:ಇಂದಿನ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸೇರಿರುವ ಜನಸ್ತೋಮ ಬಿಜೆಪಿಯವರಿಗೆ ಎಚ್ಚರಿಕೆ ಗಂಟೆ ಯಾಗಲಿದೆ ಬಸವೇಶ್ವರರ ಆಶಿರ್ವಾದ ನನ್ನ ಮೇಲಿದೆ ನೀವು ನನ್ನನ್ನು ಸೂಲಿಸಲು ಸಾಧ್ಯವಿಲ್ಲ ಎಂದು ಶಾಸಕ ಶಿವಾನಂದಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಗ್ರಾಮದಲ್ಲಿ ಸ್ವತಂತ್ರ ಅಮೃತ ಮಹೋತ್ಸವದ ನಿಮಿತ್ಯ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡ ಭಾರತ ಜೋಡೋ ಪಾಧಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೆನೆ ಎಂದು ಭರವಸೆ ನೀಡಿದ ಪ್ರಧಾನಿ ಅವರು ಇಂದು ಕೇವಲ ಹತ್ತು ಲಕ್ಷ ಉದ್ಯೋಗ ನೀಡುತ್ತೆನೆ ಎಂದು ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ, ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ನಿರೂದ್ಯೋಗ ಸಮಸ್ಯ ಹೆಚ್ಚಾಗಿದೆ, ಸ್ವತಂತ್ರö್ಯಕ್ಕಾಗಿ ಕಾಂಗ್ರೆಸ್‌ನ ಹಲವಾರು ನಾಯಕರು ಶ್ರಮಿಸಿದ್ದಾರೆ ಆದರೆ ಬಿಜೆಪಿ ಸರ್ಕಾರ ಅಂತವರ ಹೆಸರನ್ನು ತೆಗೆದು ಹಾಕುವ ಕೆಲಸಕ್ಕೆ ಮುಂದಾಗುತ್ತಿದೆ.
ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಅಂದಾಜು ರು, ೪೦೦ ಕೋಟಿ ವೆಚ್ಚದಲ್ಲಿ ಮನಗೂಳಿ ಬಿಜ್ಜಳ ರಾಜ್ಯ ಹೆದ್ದಾರಿ ಸೇರಿದಂತೆ ಹಿಂದೆ0ದು ಕಾಣದ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದೆನೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸ್ವತಂತ್ರ ಹೋರಾಟಗಾರಿರುವುದು ನನ್ನ ಕ್ಷೇತ್ರದಲ್ಲಿ ಎನ್ನುವುದು ನಮ್ಮ ಹೆಮ್ಮೆ ಎಂದರು.
ಕಾ೦ಗ್ರೆಸ್‌ನ ಜಿಲ್ಲಾ ಅಧ್ಯಕ್ಷ ರಾಜು ಆಲಗೂರ ಮಾತನಾಡಿ ೧೮೮೫ ರಿಂದ ೧೯೪೭ರವರೆಗೆ ನಡೆದ ಸ್ವತಂತ್ರö್ಯ ಹೋರಾಟ ದಲ್ಲಿ ಕಾಂಗ್ರೆಸ್ ಪಕ್ಷವು ಉಪ್ಪಿನ ಸತ್ಯಾಗ್ರಹ ಕ್ವಿಟ್ ಇಂಡಿಯಾ ಸೇರಿದಂತೆ ವಿವಿಧ ಚಳುವಳಿ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದೆ, ಸ್ವಂತAತ್ರö್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಅನೇಕ ಮಹನೀಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ ಇದನ್ನ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಭಾರತ ಜೋಡೊ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಳೆದ ೭೦ ವರ್ಷಗಳಿಂದ ನಮ್ಮ ಪಕ್ಷದಿಂದ ದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.
ಕಾ೦ಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮಹಿಳಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಎರಾದ ರಮೇಶ ಸೂಳಿಬಾವಿ, ಸುರೇಶ ಹಾರಿವಾಳ, ರಫೀಕ್ ಠಪಾಲ್, ರುಕ್ಮೀಣಿ ರಾಠೋಡ, ಅಣ್ಣಾಸಾಹೇಬಗೌಡ ಪಾಟೀಲ, ರವಿ ರಾಠೋಡ, ಸಂಗಮೆಶ ಒಲೇಕಾರ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.