ಫಲಾನುಭವಿ ರೈತ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು
ಬಸವನಬಾಗೇವಾಡಿ:ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ(ಪಿ,ಎಂ,ಕಿಸಾನ್) ಯೋಜನೆಯ ಪಡೆಯಲು ಇದೆ ಮೊದಲ ಬಾರಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು ಅ.೩೧ ಕೊನೆ ದಿನವಾಗಿದೆ ಫಲಾನುಭವಿ ರೈತ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಎಂ.ಎಚ್.ಯರಝರಿ ತಿಳಿಸಿದ್ದಾರೆ.
ಪಿಎಂ ಕಿಸಾನ ಯೋಜನೆಯು ೨೦೧೯ರಿಂದ ಜಾರಿಗೆ ಬಂದಿದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ, ಜೊತೆಗೆ ರಾಜ್ಯ ಸರ್ಕಾರವು ನಾಲ್ಕು ಸಾವಿರಿ ರೂಪಾಯಿ ನೀಡುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸೇಇ ಒಟ್ಟು ೧೦ ಸಾವಿರ ರೂ, ಸಹಾಯಧನ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರ ಖಾತೆಗೆ ಹಣ ಸಂದಾಯ ಮಾಡ ಲಾಗುತ್ತಿದೆ, ಈ ವರ್ಷ ರೈತರು ಇ-ಕೆವೈಸಿ ಮಾಡಿಸುವದು ಕಡ್ಡಾಯ ವಾಗಿದೆ, ಇ-ಕೆವೈಸಿ ಮಾಡದೆ ಇದ್ದರೆ ಹಣ ಸಂದಾಯವಾಗುವುದಿಲ್ಲ.
ಕೂಡಲೇ ರೈತರು ತಮ್ಮ ಹತ್ತಿರದ ರೈತ ಕೇಂದ್ರಗಳಿಗೆ ಅಥವಾ ಗ್ರಾಮ್ ಒನ್ ಸೆಂಟರ್‌ಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.