೨೦೨೩ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಶಾಸಕ ಶಿವಾನಂದ ಭವಿಷ್ಯ
ಸಿದ್ದರಾಮಯ್ಯ ಡಿ, ಕೆ ಶಿವುಕುಮಾರ ಮದ್ಯ ಯಾವುದೇ ಜಗಳವಿಲ್ಲ ಶಾಸಕ ಶಿವಾನಂದ ಪಾಟೀಲ ಹೇಳಿಕೆ
ಬಸವನಬಾಗೇವಾಡಿ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ,ಕೆ ಶಿವುಕುಮಾರ ಅವರ ಮದ್ಯ ಯಾವುದೇ ಜಗಳವಿಲ್ಲ ಉಹಾಪೂಹ  ಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಇಬ್ಬರ ನೇತೃತ್ವದಲ್ಲಿ ೨೦೨೩ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಶಿವಾನಂದ ಪಾಟೀಲ ಭವಿಷ್ಯ ನುಡಿದರು.
ಪಟ್ಟಣದ ವೀರಭದ್ರೇಶ್ವರ ನಗರದಲ್ಲಿರುವ ಉದ್ಯಾನವನದಲ್ಲಿ ಭಾರತ ಜೋಡೋ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ನಂಜುಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕಾಗಿದ್ದ ಬಸವನಬಾಗೇವಾಡಿ ಮತಕ್ಷೇತ್ರವು ಸಾಕಷ್ಟು ಅಭಿವೃದ್ದಿ ಹೊಂದುವ ಮೂಲಕ ಮುಂಭರುವ ದಿನಗಳಲ್ಲಿ ನಗರ ಸಭೆ ಆಗುವುದರಲ್ಲಿ ಯಾವುದೇ ಸಂದೇಹಿಲ್ಲ, ಕಲ್ಲಿನ ಮೇಲೆ ಬರೆದ ಹೆಸರು ಶಾಶ್ವತವಲ್ಲ ನಾವು ಮಾಡಿರುವ ಕೆಲಸಗಳು ಜನರ ಮನಸ್ಸಿಲ್ಲಿ ಅಚ್ಚಳಿಯದಂತೆ ಉಳಿದರೆ ಸಾಕು.
ಶಾಸಕರು ಮಾತನಾಡಬಾರದು ಶಾಸಕರ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನ ಮಾತನಾಡುವಂತಾಗಬೇಕು ಎನ್ನುವ ನಾನ್ನೂಡಿಯಂತೆ ನಾನು ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಪ್ರಮಾಣಿಕವಾಗಿ ಶ್ರಮಿಸಿದ್ದೆನೆ ಎಂದರು.
ಯತ್ನಾಳಗೆ ಟಾಂಗ್:ಕೆಲ ನಾಯಕರಿಗೆ ನನ್ನ ಹೆಸರು ಹೇಳದಿದ್ದರೆ ಊಟ ಸೇರುವುದಿಲ್ಲ ಅದಕ್ಕೆ ನಿಮಗೆ ಗಂಡಸ್ತನ ಇದ್ದರೆ ಪಕ್ಷೇತರವಾಗಿ ನಿಂತು ನನ್ನನ್ನು ಗೆಲ್ಲಿ ಎಂದು ಹೆಸರು ಹೇಳದೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರಿಗೆ ಟಾಂಗ್ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಕಲ್ಲು ದೇಸಾಯಿ, ತಾನಾಜಿ ನಗರಾಳ, ಕಲ್ಲು ಸೊನ್ನದ, ರಪೀಕ್ ಪಕಾಳೆ ಸಂಗಮೆಶ ಒಲೇಕಾರ ಮಾತನಡಿದರು. ಕರ್ಯ ಕ್ರಮಕ್ಕು ಮುನ್ನ ಪಟ್ಟಣದ ಪರಮುಖ ಬೀದಿಗಳಲ್ಲಿ ಅಪಾರ ಜನಸ್ತೋಮದೊಂದಿಗೆ ಪಾದಯಾತ್ರೆ ನಡೆಯಿತು.