ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ: ಅಭಿನಂದನೆ
ಇಂಡಿ:ತಾಲೂಕಿಗೆ ಅಂಟಿರುವ ಬರಪೀಡಿತ ಪ್ರದೇಶ ,ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ದಿಟ್ಟ ನಿರ್ಧಾರದಿಂದ ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಈ ಭಾಗದ ರೈತರಲ್ಲಿ ಸಂತಸವಾಗಿದ್ದು, ಈ ಯೋಜನೆ ಅನುಮೋ ದನೆಗೆ ಶ್ರಮಿಸಿದ ಸಿಎಂ ಬಸವರಾಜ ಬೊಮ್ಮಾಯಿ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರಿಗೆ ತಾಲೂಕಿನ ರೈತರ ಪರವಾಗಿ ಅಭಿನಂದಿಸುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನೀರಾವರಿಯಿಂದ ವಂಚಿತಗೊAಡಿರುವ ಇಂಡಿ,ಬಬಲೇಶ್ವರ,ಚಡಚಣ,ವಿಜಯಪುರ ತಾಲೂಕಿನ ಸುಮಾರು ೫೬ ಹಳ್ಳಿಗಳು ಈ ಯೋಜನೆಯಿಂದ ನೀರಾವರಿಗೆ ಅನುಕೂಲವಾಗಲಿದೆ.
ಯೋಜನೆಯಿಂದ ಈ ಭಾಗದ ಕೃಷಿ,ತೋಟಗಾರಿಕೆ,ವಾಣಿಜ್ಯ ಬೆಳೆಗಾರರಿಗೆ ಅನುಕೂಲವಾಗಲಿದ್ದು,ಲಿಂಬೆ,ದಾಳಿAಬೆ,ದ್ರಾಕ್ಷಿ ಮೊದಲಾದ ತೋಟಗಾರಿಕೆ ಬೆಳೆಯಿಂದ ಈ ಭಾಗ ಸಮೃದ್ದಿಯಾಗಲಿದೆ. ರೈತಪರ ಯೋಜನೆ ಜಾರಿಗೊಳಿಸಿದ ರೈತಪರ ಕಾಳಜಿ ಹೊಂದಿದ ಬಿಜೆಪಿ ಸರ್ಕಾರಕ್ಕೆ ಇದರ ಕೀರ್ತಿ ಸಲ್ಲಬೇಕು.ಯೋಜನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಸಚಿವ ಗೋವಿಂದ ಕಾರಜೋಲ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಕಳೆದ ೪೦ ವರ್ಷಗಳಿಂದ ಈ ಭಾಗದ ರೈತರು ಈ ಯೋಜನೆಗಾಗಿ ಹೋರಾಟ ಮಾಡುತ್ತ ಬಂದರೂ ಯೋಜನೆ ಅನುಷ್ಠಾನಗೊಳ್ಳಲಿಲ್ಲ. ೧.೨೨ ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಯಿಂದ ವಂಚಿತವಾಗಿತ್ತು.
ಈ ಯೋಜನೆಯಿಂದ ಜಿಲ್ಲೆಯ ನಾಲ್ಕು ತಾಲೂಕಗಳ ಸುಮಾರು ೧,೨೨,೮೮೫ ಎಕರೆ ಪ್ರದೇಶ ನೀರಾವರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ರಮೇಶ ಜಿಗಜಿಣಗಿ ಅವರ ಇಚ್ಚಾಸಕ್ತಿಯ ಫಲವಾಗಿ ಇಂದು ಈ ಯೋಜನೆಗೆ ಅನುಮೋದನೆ ಸಿಕ್ಕಿದೆ. ಯೋಜನೆ ಅನುಮೋದನೆಗೆ ಶ್ರಮಿಸಿದ ಎಲ್ಲ ನಾಯಕರಿಗೆ ಹಾಗೂ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಕೊರೋನಾ ಮಹಾಮಾರಿಯಿಂದ ಕಳೆದ ಎರಡು ವರ್ಷದಿಂದ ಹಬ್ಬ,ಹರಿದಿನಗಳು ಆಚರಿಸಿರಲಿಲ್ಲ. ದೇಶದ ಎಲ್ಲ ಜನತೆಗೆ ವ್ಯಾಕ್ಸೀನ್ ಹಾಕುವುದರ ಮೂಲಕ ಕೊರೋನಾ ಮಹಾಮಾರಿಯನ್ನು ಹತೋಟಿಗೆ ತರಲು ಶ್ರಮಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಈ ಬಾರಿ ಗಣೇಶೋತ್ಸವವನ್ನು ಸಂಭ್ರಮದಿAದ ಉತ್ಸಾಹದಿಂದ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು.ಗಣೇಶ ಉತ್ಸವಕ್ಕೆ ಅಽಕಾರಿಗಳು,ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದು ಹೇಳಿದ ಅವರು, ಗಣೇಶೋತ್ಸವದಲ್ಲಿ ದೇಶಭಕ್ತ ಸಾವರರ್ಕರ ಭಾವಚಿತ್ರ ಇಡಬೇಕು ಎಂದು ಹೇಳಿದರು.
Äದ್ದುಗೌಡ ಪಾಟೀಲ, ಅನೀಲಗೌಡ ಬಿರಾದಾರ,ಸಿದ್ದರಾಮ ತಳವಾರ,ಭೀಮಾಶಂಕರ ಆಳೂರ,ದೇವೆಂದ್ರ ಕುಂಬಾರ,ಮಲ್ಲು ಚಾಕುಂಡಿ,ಮಲ್ಲು ಹಾವಿನಾಳಮಠ,ಮಲ್ಲುಗೌಡ ಬಿರಾದಾರ,ಪ್ರಕಾಶ ಮಲಘಾಣ, ದಯಾನಂದ ಹುಬ್ಬಳ್ಳಿ,ಮಹೇಶ ಹೂಗಾರ,ಶ್ರೀಶೈಲಗೌಡ ಬಿರಾದಾಋ,ಪ್ರವೀಣ ಮಠ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.