ಕಳಪೆ ಕಾಮಗಾರಿ ಆರೋಪ : ಅಧಿಕಾರಿಗಳ ಮೇಲೆ ರೈತರ ಹಿಡಿಶಾಪ
ರೈತರಿಗೆ ಶಾಪವಾದ ಮುಳವಾಡ ಏತ ನೀರಾವರಿ
ಬಸವನಬಾಗೇವಾಡಿ:ರೈತರಿಗೆ ವರವಾಗಬೇಕಿದ್ದ ಮುಳವಾಡ ಏತ ನೀರಾವರಿ ಯೋಜನೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹೊಂದಾಣಿಕೆಯಿ0ದ ಶಾಪವಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ ಬಳ್ಳಾವೂರ ಕ್ರಾಸ್‌ನಿಂದ ನಾಗೂರ ಹಳ್ಳದ ವರೆಗೆ ಅಂದಾಜು ೨೧ಕೀ, ಮೀ ವರೆಗೆ ಕಾಲುವೆ ನಿರ್ಮಾಣ ಮಾಡಲಾಗಿದೆ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಕಾಲುವೆ ಕೆಲವೆಡೆ ಸಂಪೂರ್ಣ ಒಡೆದುಹೊಗಿದ್ದು ಅಂದಾಜು ಎರಡು ನೂರು ಎಕರೆ ಜಮೀನಿನಲ್ಲಿ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಸರ್ವಿಸ್ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಿ ಮಳೆ ನೀರು ಸರಾಗವಾಗಿ ಹಳ್ಳಕ್ಕ ಹರಿ ಬಿಡಲು ಸೂಚಿಸಲಾಗಿತ್ತು ಆದರೆ ಗುತ್ತಿಗೆದಾರ ಇದ್ಯಾವುದನ್ನು ಮಾಡದ ಪರಿಣಾಮ ಕಾಲುವೆಯಲ್ಲಿ ನೀರು ಸಂಗ್ರಹವಾಗಿ ಕಾಲುವೆ ಒಡೆದು ಹೊಗಿದೆ.
ಕಾಲುವೆ ಒಡೆದು ಸುಮಾರು ದಿನಗಳು ಕಳೆದರೂ ಕೃಷ್ಣಾ ಭಾಗ್ಯ ಜಲ ನಿಯಮಿತ ಅಧಿಕಾರಿಗಳು ನಾಮಕೆವಾಸ್ತೆ ಎಂಭAತೆ ಬಂದು ಹೊಗಿದ್ದಾರೆ ಹೊರತು ರೈತರಿಗೆ ಮಾತ್ರ ಯಾವುದೇ ಪರಿಹಾರ ದೊರೆತಿಲ್ಲಾ. ಜಮೀನಿನಲ್ಲಿ ನೀರು ನುಗ್ಗಿದ ಪರಿಣಾಮ ರೈತರು ಜಮೀನಿನಲ್ಲಿ ಬೆಳೆದ ಬೆಳೆ ಹಾಳಾಗಿದ್ದಲ್ಲದೆ ಜಮೀನಿನಲ್ಲಿ ವಡ್ಡ ವಾರಿಗಳು ಒಡೆದು ಹೊಗಿ ರೈತರು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವಂತಾಗಿದೆ.
ಕಾಲುವೆ ನಿರ್ಮಾಣ ಮಾಡುವ ಸಮಯದಲ್ಲಿ ಅಭಿಯಂತರರಾದ ಎಂ, ಎಸ್ ಚೌಕಿಮಠ. ಎಸ್, ಬಿ, ಬಾಗಿ ಹಾಗೂ ಸಹಾಯಕ ಅಭಿಯಂತರ ವೆಂಕಪ್ಪಾ ಶೇಗುಣಸಿ ಅವರು ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಳಪೆ ಗುಣಮಟ್ಟದ ಕಾಲುವೆ ನಿರ್ಮಾಣ ಮಾಡಿದ್ದಾರೆ ಎಂಭ ಬಲವಾದ ಆರೋಪ ಸಾರ್ವಜನಿಕ ವಲಯದಿಂದ ಕೆಳಿ ಬರುತ್ತಿದೆ.
ಕೃಷ್ಣಾ ಭಾಗ್ಯಜಲ ನಿಯಮಿತ ಮುಖ್ಯ ಅಭಿಯಂತರ ಸುರೇಶ ಎಸ್ ಒಡೆದ ಕಾಲುವೆಗಳಿಗೆ ಭೇಟಿಕೊಟ್ಟು ಕಾಮಗಾರಿಯನ್ನು ಪರೀಶಿ¯ನೆ ಮಾಡಿ ರೈತರಿಗೆ ಆದ ನಷ್ಟವನ್ನು ಭರಿಸಲು ಮುಂದಾಗಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.