ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ
ಬಸವನಬಾಗೇವಾಡಿ:ಸಮಾಜವನ್ನು ತಿದ್ದುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಪ್ರತಿಯೊಬ್ಬರು ಶಿಕ್ಷಕರಿಗೆ ತಲೆ ಬಾಗಲೆಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ವಿರಕ್ತ ಮಠದ ಸಭಾಂಗಣದಲ್ಲಿ ತಾಲೂಕಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಾರ್ಯಲಯ ಹಮ್ಮಿಕೊಂಡ ತಾಲೂಕಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ ಭವಿಷ್ಯದಲ್ಲಿ ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗ ದರ್ಶನ ಅತ್ಯವಶ್ಯಕವಾಗಿರುತ್ತದೆ ಶಿಕ್ಷಕರಾದವರು ಎಂದು ನಿವೃತ್ತಿಯಾಗಬಾರದು ಶಕ್ತಿ ಇರುವರೆಗೂ ನಿಮ್ಮ ಸೇವೆ ನಿರಂತರವಾಗಿರಬೇಕು, ತಾಲೂಕಿನಲ್ಲಿ ಶಿಕ್ಷಕರ ಭವನ ನಿರ್ಮಿಸಿಕೊಡುವಂತೆ ಬೇಡಿಕೆ ಬಂದಿದ್ದು ಮುಂಭರುವ ದಿನಗಳಲ್ಲಿ ಖಂಡಿತವಾಗಿಯೂ ಶಿಕ್ಷಕರ ಭವನ ಮಾಡುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತೆನೆ ಎಂದು ಭರವಸೆ ನೀಡಿದರು.
ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ ವೃತ್ತಿಯಲ್ಲಿಯೇ ಶ್ರೇಷ್ಠ ಪವಿತ್ರ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ, ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಜವ್ಬಾರಿಯಾಗಿದೆ ಸಮಾಜದಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ ಎಂದರು.
ವಿರಕ್ತ ಮಠದ ಸಿದ್ದಲಿಂಗ ಸ್ವಾಮಿಜಿಗಳು ಮಾತನಾಡಿದರು, ಗುರುದೇವ ಆಶ್ರಮದ ಸಂದೀಪ ಮಹೋದಯ ವಿಶೇಷ ಉಪನ್ಯಾಸ ನೀಡಿದರು, ಪುರಸಭೆ ಅಧ್ಯಕ್ಷೆ ರೇಖಾ ಬೆಕಿನಾಳ, ಉಪಾಧ್ಯಕ್ಷೆ ಲಕ್ಮೀಬಾಯಿ ಬೆಲ್ಲದ, ಕರ್ನಾಟಕ ಸಹಕಾರ ಮಹಾಮಂಡಳ ನಿರ್ದೇಶಕ ಆಯ್,ಸಿ, ಪಟ್ಟಣಶೆಟ್ಟಿ, ಮುಖಂಡರಾದ ಶಿವನಗೌಡ ಬಿರಾದಾರ, ತಹಶೀಲ್ದಾರ ವಿಜಯಕುಮಾರ ಕಡಕೋಳ, ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪಾ ಬಳಬಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ,ಎಸ್, ಅವಟಿ, ಶಿವಾನಂದ ಮಂಗಾನವರ, ಕೆ, ಆರ್ ಲಮಾಣಿ, ಎಸ್, ಎಸ್ ಅವಟಿ, ಎ,ಎಮ್ ಹಳ್ಳೂರ, ಎಮ್ ಬಿ ತೋಟದ ವೇದಿಕೆಯಲ್ಲಿದ್ದರು, ಸಂಗಮೆಶ ಪೂಜಾರಿ ಸ್ವಾಗತಿಸಿದರು, ಭಾರತಿ ಪಾಟೀಲ ನಿರೂಪಿಸಿದರು, ಮಲ್ಲಿಕಾರ್ಜುನ ಗುಡಿ ವಂದಿಸಿದರು.