ಗ್ರಾಮೀಣ ಭಾರತದ ಸ್ವಾವಲಂಬನೆಯತ್ತ ನಾವೆಲ್ಲರೂ ಕಾರ‍್ಯಪ್ರವೃತ್ತರಾಗಬೇಕು
ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ದೀನದಯಾಳ ಸಂಶೋಧನಾ ಸಂಸ್ಥೆ , ನವದೆಹಲಿ ಹಾಗೂ ಲಗು ಉದ್ಯೋಗ ಭಾರತಿ ಇವರ ಸಹಯೋಗದೊಂದಿಗೆ ವಿ.ತಾ.ವಿಯ ರಜತಮಹೋತ್ಸವದ ಅಂಗವಾಗಿ ೬ನೇಮತ್ತು ೭ನೇ ಸೆಪ್ಟಂಬರ್ ೨೦೨೨ ರಂದು “ಗ್ರಾಮೀಣ ಭಾರತಕ್ಕೆ ಸೂಕ್ತವಾದ ತಂತ್ರಜ್ಞಾನ” ವಿಷಯ ಕುರಿತು ಎರಡು ದಿನಗಳ ಕರ‍್ಯಾಗಾರವನ್ನು ವಿ.ತಾ.ವಿ, ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದ್ದು ಈ ಕರ‍್ಯಾಗಾರದ ಉದ್ಘಾಟನೆಯನ್ನು ಸೆ.೬ ರಂದು ಬೆಳಗ್ಗೆ ೧೦ ಗಂಟೆಗೆ ಸೆನೆಟ್ ಹಾಲ್, ವಿ.ತಾ.ವಿ, ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನೆ ಮಾಡಿ ಉದ್ಘಾಟನಾ ಭಾಷಣ ಮಾಡಿದ ವರಜೇಶ್ವರ ದಾಸ್, ಇಸ್ಕಾನ್ ತಂಡದ ಮುಖ್ಯಸ್ಥರು, ಗೋಕುಲದಾಮ್ ಗ್ರಾಮ, ಚಿಕಲೆ, ಬೆಳಗಾವಿ ಇವರು ಗ್ರಾಮೀಣ ಭಾರತದ ರಚನೆ ಮತ್ತು  ರ‍್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಯಲ್ಲಿ ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕೆಂದು ಹೇಳಿದರು. ಜಗತ್ತು ಈ ೨೧ನೇ ಶತಮಾನದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಆದರೆ ನಾವು ಮೂಲವನ್ನು ಮರೆತಿದ್ದೇವೆ. ನಾವು ತಾಂತ್ರಿಕವಾಗಿ ಎಷ್ಟೇ ಅಭಿವೃದ್ಧಿ ಯನ್ನು ಹೊಂದಿದರು ನಮ್ಮ ದಿನ ನಿತ್ಯದ ಅಡುಗೆ ಮನೆಯ ಆಹಾರ ರೊಟ್ಟಿ, ಅನ್ನ, ಪಲ್ಯೆ ಯಾವದು ದೊಡ್ಡ ಕರ‍್ಖಾನೆ ಗಳಲ್ಲಿ ಆಗುವದಿಲ್ಲ, ಅದಕ್ಕೆ ಮತ್ತೆ ನಮ್ಮ ಶಕ್ತಿಯ ಮೂಲವಾದ ಮನೆಯ ಅಥವಾ ಅಡುಗೆ ಮನೆಯನ್ನು ಅರಸಿ ಬರಬೇಕು. ಆದ್ದರಿಂದ, ಗ್ರಾಮೀಣ ಭಾರತವನ್ನು ಸೂಕ್ತವಾದ ತಂತ್ರಜ್ಞಾನಗಳೊಂದಿಗೆ ಸ್ವಾವಲಂಭಿ ರ‍್ಥಿಕತೆಯ ಜೊತೆಗೆ ನಿರ‍್ಗದತ್ತವಾದ ಬದುಕನ್ನು ರೂಪಿಸಿಕೊಡುವ ದೊಡ್ಡ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಈ ದಿಸೆಯಲ್ಲಿ ನಾವೆಲ್ಲರೂ ಕರ‍್ಯ ಪ್ರವೃತ್ತಿಯಾಗುವರೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿ.ತಾ.ವಿ, ಬೆಳಗಾವಿಯ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಅವರು ಭಾರತದ ರ‍್ಥಿಕತೆಗೆ ಗ್ರಾಮೀಣ ಭಾರತದ ಕೊಡುಗೆ ಸಾಕಷ್ಟು ಇದ್ದು ಒಂದು ರಾಷ್ಟ್ರ ಸ್ವಾವಲಂಬಿ ಆಗಬೇಕಾದರೆ ಪ್ರತಿ ಹಳ್ಳಿಯನ್ನು ಸ್ವಾವಲಂಭಿ ಆಗಿಸುವತ್ತ ನಾವೆಲ್ಲರೂ ಗಮನ ಹರಿಸಬೇಕು. ಸಾಮಾಜಿಕವಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಾವು ಅಥವಾ ನಮ್ಮ ಸಂಸ್ಥೆಗಳು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿರದೇ ಆ ಕ್ಷೇತ್ರವನ್ನು ಹಾಗೂ ಸಮಾಜವನ್ನು ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಕಳಕಳೆಯನ್ನು ಇಟ್ಟುಕೊಂಡು ಗ್ರಾಮೀಣ ಭಾರತಕ್ಕೆ ಅವಶ್ಯವಿರುವ ಸೂಕ್ತ ತಂತ್ರಜ್ಞಾನವನ್ನು ನೀಡಬೇಕು. ಈ ನಿಟ್ಟಿನಲ್ಲಿ, ತಮ್ಮೇಲ್ಲರ ಬಹುದೊಡ್ಡ ಆಸ್ತಿಯಾಗಿರುವ ಇಂದಿನ ವಿದ್ಯರ‍್ಥಿಗಳನ್ನು ಗ್ರಾಮೀಣ ಭಾರತದ ಕಡೆಗೆ ಮುಖಮಾಡುವಂತೆ ಹಾಗೂ ಅಲ್ಲಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ.
ಇದೇ ಉದ್ದೇಶದೊಂದಿಗೆ ವಿ.ತಾ.ವಿ. ಯು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಅನುಷ್ಠಾನದಡಿಯಲ್ಲಿ ಒಂದು ವಿಶೇಷವಾದ ಪರ‍್ಣಕಾಲಿಕ ಇಂಟರನಶಿಫ್‌ನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡಬೇಕೆಂದು ನಿಯಮವನ್ನು ರೂಪಿಸಿದೆ. ಜೊತೆಗೆ ಶಾಲೆಗಳ ದತ್ತು, ಲ್ಯಾಬ್ ಆನ್ ವ್ಹಿಲ್ಸ್ ಮುಖಾಂತರ ಗ್ರಾಮೀಣ ಪ್ರದೇಶಗಳ ಜೊತೆಗೆ ನಿರಂತರವಾಗಿ ಒಂದು ರೀತಿಯ ಸಂವಾದವನ್ನು ವಿ.ತಾ.ವಿಯು ನಡೆಸುತ್ತಿದೆ ಎಂದು ಹೇಳಿದರು.
ಇದಕ್ಕಿಂತ ಪರ‍್ವದಲ್ಲಿ ಲಗು ಉದ್ಯೋಗ ಭಾರತೀಯ ಶ್ರೀ. ಸಚೀನ ಸಬನಿಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಈ ಕರ‍್ಯಾಗಾರದ ಉದ್ದೇಶದ ಬಗ್ಗೆ ಹೇಳಿದರು. ಇದಕ್ಕೂ ಮೊದಲು ವಿ.ತಾ.ವಿಯ ಕುಲಸಚಿವ ಪ್ರೋ. ಆನಂದ ಎಸ್. ದೇಶಪಾಂಡೆಯವರು ಸ್ವಾಗತಿಸಿದರು.
ವಿ.ತಾ.ವಿಯ ಹಣಕಾಸು ಅಧಿಕಾರಿಗಳಾದ ಶ್ರೀಮತಿ. ಎಮ್. ಎ. ಸಪ್ನ ಇವರು ವಂದಿಸಿದರು. ಕರ‍್ಯಕ್ರಮದ ಸಂಯೋಜಕರಾದ ಡಾ. ನಾಗರಾಜ ಪಾಟೀಲ ಅವರು ಅತಿಥಿಗಳನ್ನು ಪರಿಚಯಸಿದರು. ಇದರಲ್ಲಿ ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಈ ವಿಷಯ ಪರಿಣಿತರು ಹಾಗೂ ಪ್ರಗತಿಪರ ರೈತರು, ವಿದ್ಯರ‍್ಥಿಗಳು ಹಾಜರಿದ್ದರು.