ಇಂಡಿಯಲ್ಲಿ ಪಿತೃ ಪಕ್ಷ ಮಾಸಾಚರಣೆ
ಇಂಡಿ:ಪಟ್ಟಣದ ಸಿಂದಗಿ ರಸ್ತೆಯ ಶಾಂತಿನಗರದಲ್ಲಿರುವ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ಸೆಪ್ಟಂಬರ್ ೧೧ ರಿಂದ ಸೆಪ್ಟಂಬರ್ ೨೪ರವರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಪಿತೃ ಮಾಸಾಚರಣೆ ಕ್ರಿಯಾವಿಧಿ ವಿಧಾನ ಮಾಡಲಾಗುವುದು. ಇದರ ಸದುಪಯೋಗವನ್ನು ಇಂಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿಪ್ರ ಬಾಂಧವರು ಪಡೆದುಕೊಳ್ಳಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಕ್ರಿಯಾ ಮಾಡಿಸುವವರು ಮುಂಚಿತವಾಗಿ ಆನಂದ್ ಕುಲಕರ್ಣಿ ೯೪೮೨೧೦೩೫೫೫, ಗೋಪಾಲ ಕುಲಕರ್ಣಿ ೯೩೮೦೪೨೦೭೩೩, ಸಂಜೀವ್ ದೇಶಪಾಂಡೆ ೮೦೭೩೫೦೦೯೧೬, ಅರ್ಚಕರಾದ ಶಶಿಕಾಂತ್ ಆಚಾರ್ಯ ೬೩೬೨೧೧೦೮೪೮ ಇವರನ್ನು ಸಂಪರ್ಕಿಸ ಬಹುದಾಗಿದೆ.