ಅನುದಾನ ರಹಿತ ಶಾಲೆಗಳಿಗೂ ಮಧ್ಯಾಹ್ನ ಬಿಸಿ ಊಟಕ್ಕಾಗಿ ಆಗ್ರಹಿಸಿ ಶಾಸಕರಿಗೆ ಮನವಿ
ಇಂಡಿ:ತಾಲೂಕಿನ ೯೨ ಖಾಸಗಿ ಅನುಧಾನ ರಹಿತ ಶಾಲೆಗಳ ವಿಧ್ಯಾರ್ಥಿಗಳು, ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಮತ್ತು ಸಿಬಂದ್ದಿ ಸರಕಾರಿ ಅನುಧಾನಿ ಶಿಕ್ಷಣ ಸಂಸ್ಥೆಗಳಿಗೆ ಬಿಸಿ ಊಟ ನೀಡಿದಂತೆ ಅನುಧಾನ ರಹಿತ ಶಾಲೆಗಳಿಗೂ ವಿಸ್ತರಿಸಬೇಕು ಕೂಡಲೆ ಸರಕಾರದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿಯವರಿಗೆ ಹಾಗೂ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಅನುಧಾನ ರಹಿತ ಲೈನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಹಾಗೂ ಖ್ಯಾತ ಉದ್ದಿಮೆದಾರ ಶ್ರೀಪತಿಗೌಡ ಬಿರಾದಾರ ಮಾತನಾಡಿ ಕಳೆದ ೩ ವರ್ಷಗಳಿಂದ ಕರೋನಾ ಮಹಾಮಾರಿಯಿಂದಾಗಿ ಶಿಕ್ಷಣ ಸಂಸ್ಥೆಗಳು ನಡೆಸುವುದು ಅತ್ಯೆಂತ ಕಷ್ಟವಾಗಿದೆ.
೧೯೯೨ರಿಂದ ಖಾಸಗಿ ಶಿಕ್ಷಣ ಶಾಲೆಗಳಿಗೆ ಸರಕಾರ ಅನುಧಾನ ನೀಡಿದೆ. ಇದಾದ ನಂತರ ನಂತರ ಸರಕಾರ ಅನುಧಾನಕ್ಕೆ ಒಳಪಡಿಸಿಲ್ಲ ಹೀಗಾಗಿ ಅನುಧಾನ ರಹಿತ ಶಿಕ್ಷಣ ಸಂಸ್ಥೆ ಗಳಲ್ಲಿ ದುಡಿಯುತ್ತಿರುವ ಶಿಕ್ಷಕರ ವಯೋಮಿತಿ ಮೀರಿ ಬೀದಿಪಾಲಾಗುವ ಪರಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಅನುಧಾನಿತ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ,ಪಠ್ಯ ಪುಸ್ತಕ ಕೊಟ್ಟಂತೆ ಅನುಧಾನ ರಹಿತ ಶಾಲೆಗಳಿಗೂ ನೀಡಿದರೆ ಅನುಕೂಲವಾಗುತ್ತದೆ. ಕೂಡಲೆ ನಮ್ಮ ಮನವಿಗೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅನುಧಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ,ಶಿಕ್ಷಕರ ವಿಧ್ಯಾರ್ಥಿಗಳ ಪ್ರತಿಭಟನೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು ಕೋವಿಡ್ -೧೯ ಸಂಭವಿಸಿ ಇಡೀ ವಿಶ್ವ ಆರ್ಥಿಕ ಸಂಕಷ್ಟದಲ್ಲಿದೆ. ಶಿಕ್ಷಣ ಸಂಸ್ಥೆಗಳ ಪರಸ್ಥಿತಿ ಹೇಳತೀರದು, ಅನುಧಾನ ರಹಿತ ಶಿಕ್ಷಣ ಸಂಸ್ಥೆಗಳು ತೊಂದರೆಯಲ್ಲಿವೆ.
ಪಟ್ಟಣದಲ್ಲಿರು ಅನುಧಾನ ರಹಿತ ಶಾಲೆ ಕಾಲೇಜುಗಳು ಮುಚ್ಚಿರುವುದು ಕೇಳಿದ್ದೇನೆ. ನಾನು ಈ ಭಾರಿ ಸದನಲ್ಲಿ ನಿಮ್ಮ ಕಷ್ಟ ,ನಷ್ಟಗಳ ಬಗ್ಗೆ ಪ್ರಮಾಣಿಕವಾಗಿ ಧ್ವನಿ ಎತ್ತುವುದಾಗಿ ಅಶ್ವಾಸನೆ ನೀಡಿದರು.
ಎಸ್.ಎ ನಾಲಬಂದ್, ಜಿ.ಎಸ್ ಗೋರ್ಪಡೆ, ಬಿ.ಎಸ್ ಪಾಟೀಲ, ಜೀತಪ್ಪ ಕಲ್ಯಾಣಿ, ಎಂ.ಡಿ ಶೇಖ, ಹುಚ್ಚಪ್ಪ ತಳವಾರ, ಅವಿನಾಶ ಬಗಲಿ,ಜಾವೀದ ಮೋಮಿನ್‌ಸೇರಿದಂತೆ ಅನೇಕ ಶಾಲೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.