ಉಮೇಶ ಕತ್ತಿ ಉತ್ತರ ಕರ್ನಾಟಕದ ಬೃಹತ್ ಶಕ್ತಿ : ಮೆಟಗುಡ್ಡ
ಬೈಲಹೊಂಗಲ:ಪಟ್ಟಣದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸಚಿವ ಉಮೇಶ ಕತ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅತ್ಯಂತ ಭಾವುಕರಾಗಿ ಕತ್ತಿ ಅವರೊಡಗಿನ 43 ವರ್ಷಗಳ ಒಡನಾಟವನ್ನು ಹಂಚಿಕೊಂಡರು.
ನೇರ ನಡೆ-ನುಡಿಯ ನಿಷ್ಠುರತೆಗೆ ಹೆಸರಾದವರು, ವಿಶೇಷವಾಗಿ ಉತ್ತರ ಕರ್ನಾಟಕದ ತಾರತಮ್ಯಕ್ಕೆ ಅತ್ಯಂತ ಕ್ರಿಯಾಶೀಲ ರಾಗಿ ಧ್ವನಿಯತ್ತಿದ್ದ ಮೊದಲ ನಾಯಕ, ಎಂಟು ಬಾರಿ ಶಾಸಕರಾಗಿ ನಾಲ್ಕು ಬಾರಿ ಸಚಿವರಾಗಿ ಅವರ ಸೇವೆ ಅನನ್ಯ, ಒಂದು ವೇಳೆ ಬೆಳಗಾವಿ ಜಿಲ್ಲೆ ವಿಭಜನೆಯಾಗುವು ದಾದರೆ ಬೈಲಹೊಂಗಲವನ್ನೇ… ಜಿಲ್ಲೆ ಮಾಡುತ್ತೇನೆಂದು ಹೇಳಿದಂತಹ ನಾಯಕ, ಒಡಹುಟ್ಟಿದ ಸಹೋದರನಂತೆ ನನ್ನೊಂದಿಗೆ ಒಡನಾಟವನ್ನು ಮಾಡಿ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಈಗಲೂ ನನಗೆ ನಂಬಲಾಗುತ್ತಿಲ್ಲ ಅಂತಹ ಒಬ್ಬ ಮಹಾನ ನಾಯಕನನ್ನು ಕಳೆದುಕೊಂಡು ನಮ್ಮ ಭಾರತೀಯ ಜನತಾ ಪಕ್ಷ ಹಾಗೂ ಬೆಳಗಾವಿ ಜಿಲ್ಲೆ ಬಡವಾಗಿದೆ ಎಂದು ಮಾಜಿ ಶಾಸಕ ಶ್ರೀ ಜಗದೀಶ ಮೆಟಗುಡ್ಡ ಭಾವುಕ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿಜೆಪಿ ಜಿಲ್ಲಾ ಗುರು ಮೆಟಗುಡ್ಡ, ಪುರಸಭೆ ಸದಸ್ಯ ಸಾಗರ ಭಾವಿಮನಿ, ಬಿಜೆಪಿ ಮಂಡಲ ಉಪಾಧ್ಯಕ್ಷ ಸುಭಾಸ ತುರುಮರಿ,ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಅಮ್ಮಿನಭಾವಿ, ಹಿರಿಯ ವಕೀಲರಾದ ರವಿ ಮೆಟಗುಡ, ಸಂತೋಷ ಬಾವಿ, ರವೀಂದ್ರ ತುರಮ ಉಪಸ್ಥಿತರಿದ್ದರು.