ಸಣ್ಣಹೊಸೂರು ಶಾಲೆಯಲ್ಲಿ ಹೈ.ಕ. ವಿಮೋಚನಾ ದಿನಾಚರಣೆ
ಸಿರವಾರ:ತಾಲೂಕಿನ ಸಣ್ಣಹೊಸೂರು ಗ್ರಾಮದ ಉನ್ನತೀಕರಿಸಿದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜಗೌಡ ಅತ್ತನೂರು ಧ್ವಜಾ ರೋಹಣ ನೆರವೇರಿಸಿದರು.
ಶಿಕ್ಷಕ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು 371 (ಜೆ) ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಇದೇ ವೇಳೆ ಮುಖ್ಯಶಿಕ್ಷಕ ನಾಗಪ್ಪ, ಎಸ್ಡಿಎಂಸಿ ಉಪಾಧ್ಯಕ್ಷ ವಡಿಕಪ್ಪ, ಸದಸ್ಯರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳಾದ ಆಂಜನೇಯ, ವಿರೂಪಾಕ್ಷಿ ಹಾಗೂ ಎಸ್ಡಿಎಂಸಿ ಮಾಜಿ ಸದಸ್ಯ ಚಂದ್ರಗೌಡ, ಶಾಲೆಯ ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

