ಭಾರತ ದೇಶ ಸ್ವಾತಂತ್ರ‍್ಯಗೊಳಿಸುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ: ಯಶವಂತರಾಯಗೌಡ ಪಾಟೀಲ.
ಇಂಡಿ:ಕಾಂಗ್ರೆಸ್ ಪಕ್ಷಕ್ಕೆ ೭೦ ವರ್ಷದ ಸುಧೀರ್ಘ ತನ್ನದೆಯಾದ ಇತಿಹಾಸ ಹೊಂದಿದೆ . ದೇಶದ ಸ್ವಾತಂತ್ರ‍್ಯಗೊಳಿಸುವಲ್ಲಿ ಪಕ್ಷದ ದೊಡ್ಡ ಕೊಡುಗೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪೂರ ರಸ್ತೆಯ ಕಾಂಗ್ರೇಸ್ ಕಾರ್ಯಲಯದಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಇವರ ಪದಗ್ರಹಣ ಸಮಾರಂಭದ ಅಧ್ಯಕ್ಷ ವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಒಂದು ಮನೆ ಇದ್ದಂತೆ ಇಲ್ಲಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಿದಂತೆ. ಅಧಿಕಾರ ಶಾಶ್ವತ ಇಲ್ಲ ಮನುಷ್ಯನಿಗೆ ಇದ್ದ ಅಧಿಕಾರ ವನ್ನು ಒಳ್ಳೆಯ ಜಾಣತನದಿಂದ ಪಕ್ಷಕ್ಕಾಗಿ ದುಡಿಯಬೇಕು. ಜಾವೀದ ಮೋಮಿನ ಕಳೆದ ಅನೇಕ ವರ್ಷಗಳಿಂದ ಸುಧೀರ್ಘ ಕಾಂಗ್ರೆಸ್ ಒಬ್ಬ ಕಟ್ಟಾ ಅಭಿಮಾನಿಯಾಗಿ ಸಾಮಾನ್ಯ ಕಾರ್ಯಕರ್ತರನಾಗಿ ದುಡಿದ್ದಾನೆ. ಯಾರು ಪಕ್ಷದ ಶಿಸ್ತಿನ ಸಿಪಾಯಿಯಂತೆ ದುಡಿಯುತ್ತಾರೆ. ಅಂತಹವರಿಗೆ ಮುಂಬ ರುವ ದಿನಗಳಲ್ಲಿ ಒಳ್ಳೇಯ ಹುದ್ದೆ ಕೊಡುವ ಭರವಸೆ ನೀಡಿದರು.
ಈ ಹಿಂದೆ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ನೀಡುವಲ್ಲಿ ಸ್ವಲ್ಪ ಲೋಪ ದೋಷಗಳಾಗಿವೆ. ಆದರೂ ಕೂಡಾ ೧೨ನೇ ಶತಮಾನ ಅಣ್ಣ ಬಸಣ್ಣನ ಸಂದೇಶದ0ತೆ ಸರ್ವರಿಗೂ ಸಮಬಾಳು ಸಮಪಾಲು ಎಬ ಸಿದ್ದಾಂತದಲ್ಲಿ ಸರ್ವ ಸಮುದಾಯಕ್ಕೆ ಅಧಿಕಾರ ನೀಡಿರುವೆ.
ಜಾವೀದ ಮೋಮಿನ ಒಬ್ಬ ಒಳ್ಳೆಯ ಯುವ ನಾಯಕ ಇವರಿಗೆ ತಮ್ಮೇಲ್ಲರ ಮಾರ್ಗದರ್ಶನ ದೊಂದಿಗೆ ಮುಂಬರುವ ದಿನಗಳಲ್ಲಿ ಪಕ್ಷ ದೊಡ್ಡ ಶಕ್ತಿಯಾಗಿ ಬೆಳೆಸಲು ಪ್ರೇರಣೆ ನೀಡಬೇಕು, ವ್ಯಕ್ತಿ ಆಧಾರಿತ ಪಕ್ಷವಾಗಿರಬಾರದು ಪಕ್ಷ ಆಧಾರಿತವಾಗರಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಮನವಿ ಮಾಡಿದರು.
ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕಾಂಗ್ರೆಸ್ ಪ್ರಚಾರ ಸಮೀತಿಯ ಬಸವರಾಜ ಕೊಕಟನೂರ ಮಾತನಾಡಿದರು.
***ನಾನು ಕಿರಿಯ ವಯಸ್ಸಿನಲ್ಲಿ ಇಂತಹ ಜವಾಬ್ದಾರಿ ಹುದ್ದೆ ನೀಡಿರುವ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಜೀವನದ ಕೊನೆ ಉಸಿರು ಇರುವವರೆಗೂ ಮರೆಯುವುದಿಲ್ಲ. ಮತಕ್ಷೇತ್ರದ ಜನತೆ,ಹಿರಿಯರ.ಕಿರಿಯರ ಎಲ್ಲರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಹೇಳಿದರು.ಜಾವೀದ ಮೋಮಿನ, ನೂತನ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ
ಸಾಂಬಾಜಿ ಮೋಮಿನ, ಪ್ರಚಾರ ಸಮಿತಿಯ ಬಸವರಾಜ ಕೊಕಟನೂರ, ರಷೀದ ಅರಬ, ಭೀಮಣ್ಣಾ ಕೌಲಗಿ, ಶ್ರೀಕಾಂತ ಕೂಡಿಗನೂರ,ಚಂದ್ರಶೇಖರ ರೂಗಿ, ಮಲ್ಲುಗೌಡ ಪಾಟೀಲ, ಕಲ್ಲನಗೌಡ ಬಿರಾದಾರ, ಅಣ್ಣಾರಾಯ ಬಿದರಕೋಟಿ, ಮಂಜುನಾಥ ಕಾಮಗೊಂಡ, ಜೆಟ್ಟಪ್ಪ ರವಳಿ, ಪ್ರಶಾಂತ ಕಾಳೆ, ಹರಿಶ್ಚಂದ್ರ ಪವಾರ, ಧರ್ಮು ವಾಲೀಕಾರ, ಸಂಜು ಚವ್ಹಾಣ, ಇಲಿಯಾಸ ಬೋರಾಮಣಿ,ಅಪ್ಪು ಕಲ್ಲೂರ, ಭೀಮುಸಾಹುಕಾರ ಬಸನಾಳ, ಮಹಿಬೂಬ ಅರಬ , ಅವಿನಾಶ ಬಗಲಿ, ಮಹೇಶ ಹೊನ್ನಬಿಂದಗಿ, ಪುಂಡಲೀಕ ಹೂಗಾರ ,ಸಂತೋಷ ಪರಶೇನವರ್ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರಿದ್ದರು.