ಭಾರತ ಬಲಾಢ್ಯಕ್ಕೆ ಪ್ರಧಾನಿ ದೂರದೃಷ್ಠಿ ಕಾರಣ: ದಯಾಸಾಗರ ಪಾಟೀಲ
ಇಂಡಿ:ಭಾರತ ದೇಶ ವಿಶ್ವದಲ್ಲಿಯೇ ಬಲಾಢ್ಯ ದೇಶವಾಗಿದ್ದು ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಠಿ ಮತ್ತು ದೇಶ ಭಕ್ತಿಯ ಕಾರಣ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ತಾಲೂಕಿನ ಹಡಲಸಂಗ ಗ್ರಾಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು ಇಂದು ಭಾರತ ದೇಶ ಪ್ರಪಂಚದ ಅನೇಕ ದೇಶಗಳು ಭಾರತಕಡೆ ಮುಖ ಮಾಡಿ ನೋಡುವಂತಾಗಲು ಪ್ರಧಾನಿಗಳ ದೂದೃಷ್ಠಿಯಿಂದ ಮಾತ್ರ ಸಾಧ್ಯವಾಗಿದೆ. ದೇಶದಲ್ಲಿ ಸರ್ವರಿಗೂ ಸಮಾನ ಬದುಕುವ ಅವಕಾಶ ನೀಡಿರುವ ಪ್ರಧಾನ ಮಂತ್ರಿಗಳು ಜನ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದ್ದಾರೆ.
೭೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ ಅಭಿವೃದ್ದಿ ಶೂನ್ಯ. ಸ್ವಾಂತ್ರö್ಯಕ್ಕಾಗಿ ಹೋರಾಟ ಮಾಡಿದ ಅಂದಿನ ಕಾಂಗ್ರೇಸಿನವರ ಇಂದು ಉಳಿದಿಲ್ಲ. ಒಂದೇ ಮನಗೆ ಸೀಮಿತವಾಗಿದೆ. ನರೇಂದ್ರ ಮೋದಿ ಅನುವಂಶಿಕತೆ ಹೋಗಲಾಡಿಸಿ ಎಲ್ಲರಿಗೂ ಅಧಿಕಾರ ಸಿಗುವಂತೆ ಮಾಡಿರುವ ಕೀರ್ತಿಮೋದಿಜೀಗೆ ಸಲ್ಲುತ್ತದೆ. ಮುಂಬರುವ ದಿನಗಳಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರದ ಸಾಧನೆ ಸಾರುವ ಬೀತಿ ಪತ್ರ ಮನೆ ಮನೆಗೆ ಹಂಚಿ ಪ್ರಚಾರ ಮಾಡಿದರು.
ಬಿಜೆಪಿ ಮುಖಂಡ ಶ್ರೀನಿವಾಸ ಕಂದಗಲ್ , ಪ್ರದೀಪ ಉಟಗಿ,ದಯಾನಂದ ಹುಬ್ಬಳ್ಳಿ, ಈರಣ್ಣ ವಾಲೀಕಾರ, ನಾಗಪ್ಪ ಬಿರಾದಾರ, ಗೋಪಾಲ ರಿಸಲ್ದಾರ, ಸಿದ್ದಲಿಂಗ ಪುಣ್ಯಕರ್, ಸಂಜಯ ರಜಪೂತ, ರೇವಣಸಿದ್ದ ಮಾದರ, ಪ್ರವೀಣ ಲೋಣಿ ಸೇರಿದಂತೆ ಅನೇಕರಿದ್ದರು