ಪುತ್ರಿಯರ ದಿನದ ಪ್ರಯುಕ್ತ ವಂಡರ್‌ಲಾ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ಟಿಕೆಟ್‌!
ಪುತ್ರಿಯರ ದಿನಾಚರಣೆ ಪ್ರಯುಕ್ತ ವಂಡರ್‌ಲಾ ಸೆ. 25ರಂದು ಹೆಣ್ಣು ಮಕ್ಕಳಿಗೆ ಉಚಿತ ಟಿಕೆಟ್‌ ನೀಡುವುದಾಗಿ ಘೋಷಿಸಿದೆ.
ಇದೇ ಸೆ.25ರಂದು ಪುತ್ರಿಯರ ದಿನಾಚರಣೆ ಇರಲಿದ್ದು, ಈ ದಿನ ಹೆಣ್ಣುಮಕ್ಕಳಿಗೆ ಉಚಿತ ಟಿಕೆಟ್‌ ನೀಡಲಾಗುವುದು ಈ ಕೊಡುಗೆಯ ಅನುಕೂಲ ಪಡೆಯಬೇಕಾದಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ಪೋಷಕರೊಂದಿಗೆ ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಮೊದಲ ಸಾವಿರ ಬುಕ್ಕಿಂಗ್‌ಗೆ ಈ ಕೊಡುಗೆ ಅನ್ವಯವಾಗಲಿದೆ.
ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವ ವೇಳೆ, ‘’ ಎಂಬ ಕೋಡ್‌ನಲ್ಲಿ ನಮೂದಿಸಿ ಬುಕ್ಕಿಂಗ್‌ ಮಾಡುವುದರಿಂದ ಈ ಕೊಡುಗೆ ಪಡೆಯಬಹುದು. ಒಂದು ಕುಟುಂಬದಲ್ಲಿ ಪೋಷಕರೊಂದಿಗೆ ತೆರಳುವ ಒಬ್ಬ ಮಗಳಿಗೆ ಮಾತ್ರ ಈ ಕೊಡುಗೆ ಅನ್ವಯ ವಾಗಲಿದೆ.
ಬುಕ್ಕಿಂಗ್‌ ಬಳಿಕ, ಸೆ,೨೫ರಂದು ಪಾರ್ಕ್‌ಗೆ ತೆರಳುವ ವೇಳೆ ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯ. ಬುಕ್ಕಿಂಗ್‌ಗಾಗಿ ://../ ವೆಬ್‌ಸೈಟ್‌ಗೆ ಭೇಟಿ ನೀಡಿ. ಹೆಚ್ಚಿನ ವಿವರಗಳಿಗೆ 080 37230333, 080 35073966 ಸಂಪರ್ಕಿಸಿ.