ಹುಬ್ಬಳ್ಳಿಯ ವರ್ಶಿಣಿಗೆ ಒಲಿದ ಮಿಸ್ ಊರ್ವಶಿ 2022ರ ಕಿರೀಟ
ಹುಬ್ಬಳ್ಳಿ:ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022ರ ಕಿರೀಟವನ್ನು ಹುಬ್ಬಳ್ಳಿಯ ವರ್ಶಿಣಿ ಎಂಬ ಯುವತಿ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಹುಬ್ಬಳ್ಳಿಯ ವರ್ಶಿನಿ ಎಂಬ ಸೆ.11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ.
ಹುಬ್ಬಳ್ಳಿಯ ವರ್ಶಿಣಿ ಮಿಸ್ ಊರ್ವಶಿ 2022 ಕಿರೀಟ ಪಡೆದಿದ್ದು, ಜೈಪುರದ ರಾಜಬಿ ಮೊದಲ ರನ್ನರ್ ಅಪ್ ಮತ್ತು ಸಿಯಾ ರೈಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ.
ನಟ ವಿವೇಕ್‌ ಒಬೇರಾಯ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 20ರ ವರ್ಷದ ವರ್ಷಿಣಿ ಧಾರವಾಡದ ಕೆಸಿಡಿ ಕಾಲೇಜ್‌ನಲ್ಲಿ ಕೋರ್ಸ್‌ ತೆಗೆದುಕೊಂಡಿದ್ದು, ವ್ಯಾಸಂಗದಲ್ಲಿ 2ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೈಪುರದಲ್ಲಿ ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಜನರು ಸ್ಪರ್ಧಿಸಿದ್ದರು. ಮಿಸ್ ಊರ್ವಶಿ ಕಿರೀಟವನ್ನು ಕರ್ನಾಟಕಕ್ಕೆ ತಂದು ಕೊಡುವುದರ ಜೊತೆಗೆ ಇವರು ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವರ್ಷಿಣಿ ಈಗಾಗಲೇ ಎರಡು ಬಾರಿ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ. ಧಾರವಾಡ ಗ್ಲ್ಯಾಮ್ ಬ್ಯೂಟಿ ಆಗಿಯೂ ವಿಜೇತರಾಗಿದ್ದರು.