ಹಣದಾಸೆಗೆ ಸ್ವಾಭಿಮಾನ ಮಾರಿಕೊಳ್ಳಬೇಡಿ: ಶಾಂತಮಯ ಶ್ರೀ
ಹಾಲುಮತ ಸಮಾಜದ ಶಕ್ತಿ ಪ್ರದರ್ಶನ
ಮುದ್ದೇಬಿಹಾಳ :ಹಣದಾಸೆಗಾಗಿ ಜೀವನ ಪರ್ಯಂತವಾಗಿ ನಿಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವುದೂ ಅಲ್ಲದೇ ನಿಮ್ಮನ್ನು ನಂಬಿರುವ ಸಮಾಜವನ್ನು ಬಲಿಕೊಡುವ ಕೆಲಸ ಮಾಡಬೇಡಿ ಎಂದು ಸರೂರ-ಅಗತೀರ್ಥ ಹಾಲುಮತ ಗುರುಪೀಠದರೇವಣಸಿದ್ದೇಶ್ವರ ಶಾಂತಮಯ ಶ್ರೀಗಳು ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಗುರುವಾರ ಮದರಿ ಕಲ್ಯಾಣಮಂಟಪದಲ್ಲಿ ಹಮ್ಮಿ ಕೊಂಡಿದ್ದ ಹಾಲುಮತ ಸಮಾಜದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇನ್ನುಳಿದ ಮೇಲ್ವರ್ಗದ ಸಮಾಜದವರು ಚುನಾವಣೆಯ ಸಮಯದಲ್ಲಿ ಕುರುಬ ಜನಾಂಗವನ್ನು ಖರೀದಿಸುವ ಭಾವನೆ ಹೊಂದಿದ್ದಾರೆ.ಅದಕ್ಕೆ ನಾವು ಬಲಿಯಾಗು ತ್ತಿದ್ದೇವೆ.
ಮುಂದಿನ ದಿನಗಳಲ್ಲಿ ಎಲೆಕ್ಷನ್ ಸಮಯದಲ್ಲಿ ರೊಕ್ಕದ ಆಸೆಗಾಗಿ,ಹೆಂಡದ ಆಸೆಗಾಗಿ ಸಮಾಜ ಬಲಿಕೊಡಬೇಡಿ. ಒಗ್ಗಟ್ಟಾಗಿ ನಿಂತರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ನಮ್ಮನ್ನು ಮುಗ್ಧರು ಎನ್ನುತ್ತಲೇ ನಮ್ಮ ಮುಗ್ಧತೆಯನ್ನು ದುರುಪಯೋಗ ಮಾಡಿ ಕೊಳ್ಳುತ್ತಿದ್ದಾರೆ. ಬಹುಸಂಖ್ಯಾತ ಸಮುದಾಯವಾಗಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಹಕ್ಕನ್ನು ನಾವು ಕೇಳುವಂತಾಗಬೇಕು. ಚುನಾವಣೆಯ ಸಮಯದಲ್ಲಿ ಲೀಡರ್ಸ್ ಎಂದು ಇರುವರು ೨೦-೩೦ ಲಕ್ಷ ರೂ.ತೆಗೆದುಕೊಂಡು ಸುಮ್ಮನಿರ ಬಹುದು. ಆದರೆ ಯುವಕರು ಈಗ ಜಾಗೃತರಾಗಿದ್ದಾರೆ.ಸಮಾಜದ ಬೆಂಬಲಕ್ಕೆ ನೀವಿದ್ದರೆ ಸಮಾಜ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ನಿಮ್ಮ ಸಮಾಜವನ್ನು ತಾಯಿಯಂತೆ ಮುದ್ದಾಡಿ ಅನ್ಯ ಸಮಾಜದವರನ್ನು ಪ್ರೀತಿಯಿಂದ ಕಾಣಿ ಎಂದು ಹೇಳಿದರು.
ತಾಲೂಕಾ ಕುರುಬರ ಸಂಘದ ಅಧ್ಯಕ್ಷ,ಸಭೆಯ ನೇತೃತ್ವ ವಹಿಸಿದ್ದ ಎಂ.ಎನ್.ಮದರಿ ಮಾತನಾಡಿ, ಸ್ವಾತಂತ್ರö್ಯನ0ತರ ಬಳಿಕ ಎಸ್ಸಿ,ಎಸ್ಟಿ ಜನಾಂಗ ಹಾಗೂ ಇತರೆ ಸಣ್ಣ ಸಣ್ಣ ಸಮಾಜದವರಿಗೆ ಬೆಂಬಲವಾಗಿ ಕುರುಬ ಸಮಾಜ ನಿಂತಿದೆ.ನಮಗೆ ಅವರು ನಿಂತಿದ್ದಾರೆ.ಯಾವುದೇ ಜಾತಿಯವರನ್ನು ಕನಿಷ್ಠವಾಗಿ ನೋಡದೇ ಸಹೋದರತೆಯ ಭಾವನೆಯಿಂದ ಕಂಡಾಗ ನಾವು ಮುಂದೆ ಬರಲು ಸಾಧ್ಯವಿದೆ.ಜನಸೇವೆ ಮಾಡುವ ಬಯಕೆ ಹೊಂದಿದ್ದು ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು. ಬರಲಿರುವ ದಿನಗಳಲ್ಲಿ ಸಮಾಜದಲ್ಲಿ ಯಾರಿಗೆ ಅವಕಾಶ ಸಿಕ್ಕರೂ ಅವರನ್ನು ಬೆಂಬಲಿಸುವ ಕೆಲಸವನ್ನು ಎಲ್ಲರೂ ಕೂಡಿ ಮಾಡೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ,ಮುಖಂಡ ಎಂ.ಎಚ್.ಹಾಲಣ್ಣವರ ಮಾತನಾಡಿ,ನಮ್ಮಲ್ಲಿರುವ ಮೌಢ್ಯತೆ,ಮುಗ್ಧತೆಯನ್ನು ಮತ್ತೊಂದು ಸಮಾಜದವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ನಮ್ಮ ಜನಾಂಗದವರ ಮನಸ್ಥಿತಿಯನ್ನು ಬದಲಾಯಿಸುವ ಕಾರ್ಯ ಮಾಡಬೇಕಿದೆ.ಇನ್ನು ಮೇಲೆ ನಮ್ಮನ್ನು ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಹಾಲುಮತ ಸಮಾಜ ಮುಂದಿನ ದಿನಗಳಲ್ಲಿ ಏನನ್ನಾದರೂ ಸಾಧಿಸುವ ವಿಶ್ವಾಸ ಬಂದಿದೆ.ರಾಜಕೀಯ ಶಕ್ತಿ ಬರಬೇಕಾದರೆ ನಾವು ಒಗ್ಗಟ್ಟಾಗಬೇಕು.ಈಗ ಅಂತಹ ಸಂದರ್ಭ ಬಂದಿದ್ದು ಸಮಾಜದಲ್ಲಿ ಹಲವು ನಾಯಕರು ರಾಜಕೀಯ ಚುಕ್ಕಾಣಿ ಹಿಡಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ ಬಸವ ಸಂಗೊಳ್ಳಿ ಮುದಗೊಂಡ ಮಹಾರಾಜರು,ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ವಕೀಲರಾದ ಎಂ.ಎಸ್.ಅಮಲ್ಯಾಳ,ಎA.ಎಚ್.ಕ್ವಾರಿ,ಲಕ್ಷö್ಮಣ ಬಿಜ್ಜೂರ,ಬಸವರಾಜ ಜೈನಾಪೂರ,ಕುರುಬ ಸಂಘದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಯರನಾಳ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ,ಅರಳಿಚಂಡಿ ಪರಮಾನಂದ ಮಹಾರಾಜರು, ತಾಳಿಕೋಟಿ ಕುರುಬರ ಸಂಘದ ಅಧ್ಯಕ್ಷ ಸಾಯೇಬಣ್ಣ ಹಾಲ್ಯಾಳ,ನಿಡಗುಂದಿ ಕುರುಬರ ಸಂಘದ ಅಧ್ಯಕ್ಷ ಮುತ್ತಣ್ಣ ಮುತ್ತಣ್ಣವರ,ತಾ.ಪಂ ಮಾಜಿ ಅಧ್ಯಕ್ಷ ಎಚ್.ಟಿ.ಕುರಿ, ಮುಖಂಡರಾದ ನಂದೆಪ್ಪ ಗುರಿಕಾರ,ಬಸವರಾಜ ಶಿರೋಳ,ಪುರಸಭೆ ಸದಸ್ಯ ಬಸವರಾಜ ಮುರಾಳ, ಬಸವರಾಜ ಗುಳಬಾಳ, ಅಕ್ಕಮಹಾದೇವಿ ಹಾಲ್ಯಾಳ, ಸಿದ್ದಾಪೂರದ ಒಡೆಯರ ಸ್ವಾಮೀಜಿ, ಮಂಜುಳಾ ಕೆಸರಟ್ಟಿ,ರವಿ ಜಗಲಿ, ಪರಶುರಾಮ ನಾಗರಬೆಟ್ಟ,ಸಂಗಣ್ಣ ಮೇಲಿನಮನಿ,ಸರೂರ ಹಾಲುಮತ ಗುರುಪೀಠದ ಗುರುವಿನ ಬಳಗದವರು ಇದ್ದರು.
ಗೋಪಾಲ ಹೂಗಾರ ಕಾರ್ಯಕ್ರಮ ನಿರೂಪಿಸಿದರು.