ಬಿಜೆಪಿ ಬೂತ್ ಮಟ್ಟದ ಸಾರ್ವಜನಿಕ ಸಮಾವೇಶ
ಕೊಲ್ಹಾರ:ಸೆ.27 ರಂದು ಬಿಜೆಪಿ ಬೂತ್ ಮಟ್ಟದ ಸಾರ್ವಜನಿಕ ಸಮಾವೇಶವನ್ನು ಬಸವನಬಾಗೇವಾಡಿ ಪಟ್ಟಣದ ಪಂಚಾ ಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಸೆಪ್ಟೆಂಬರ್ 27 ರಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನಕುಮಾರ ಕಟೀಲ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂಸದ ರಮೇಶ ಜಿಗಜಿಣಗಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಉಪಸ್ಥಿತಿಯಲ್ಲಿ ಬಸವನಬಾಗೇವಾಡಿ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದ 233 ಬೂತ್ ಅಧ್ಯಕ್ಷರುಗಳ, ಪ್ರತಿ ಬೂತ್ಗಳಲ್ಲಿರುವ ಬಿಎಲ್ಓ 2 ಇವರ ಸಭೆಯನ್ನು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗೆ ನಂತರ ಬಸವನಬಾಗೇವಾಡಿ ಮತಕ್ಷೇತ್ರದ ಮತದಾರರ ಪಟ್ಟಿಯ ಪೇಜ್ ಪ್ರಮುಖರು ಮತ್ತು ಪಂಚರತ್ನಗಳ ಸಮಿತಿ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಫಲಾನುಭವಿಗಳ ಹಾಗೂ ಸಾರ್ವಜನಿಕ ಸಮಾವೇಶವನ್ನು ಸಾಯಂಕಾಲ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2012 ರಲ್ಲಿ ಬಿಜೆಪಿ ಸರಕಾರದಲ್ಲಿ ಆದಂತಹ ಮುಳವಾಡ ಏತ ನೀರಾವರಿ ಮೂರನೆಯ ಹಂತ, ಚಿಮ್ಮಲಗಿ ಏತ ನೀರಾವರಿ, ಗುತ್ತಿಬಸವಣ್ಣ ಏತ ನೀರಾವರಿ, ಕೆರೆ ತುಂಬುವ ಯೋಜನೆಗಳಿಗೆ ಭೂಮಿಪೂಜೆ ಮಾಡಿರುವಂತಹ ಏಷ್ಯಾ ಖಂಡದಲ್ಲಿಯೇ ಪ್ರಥಮ ಲಿಫ್ಟ್ ಎರಿಗೇಷನ್ ಮಸೂತಿ ಜಾಕ್ವೆಲ್ ಹಾಗೂ ರಾಜ್ಯ ಸರಕಾರ ವಿದ್ಯುತನಲ್ಲಿ ಸ್ವಾವಲಂಬನೆ ಆಗುವಲ್ಲಿ ಪ್ರಮುಖವಾದ ಕೂಡಗಿ ಎನ್ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನಕುಮಾರ್ ಕಟೀಲ್ ಹಾಗೂ ಸಮಾ ವೇಶಕ್ಕೆ ಬರುವ ವರಿಷ್ಠರನ್ನು ಭೇಟಿ ಮಾಡಲು ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗದೀಶ ಸುನಗದ ಇತರರು ಇದ್ದರು.