೨೨೪ ಮತಕ್ಷೇತ್ರಗಳಿಗೂ ಅನುದಾನ ಸಮಾನ ಹಂಚಿಕೆಯಾಗಲಿ: ಯಶವಂತರಾಯಗೌಡ ಪಾಟೀಲ
ಇಂಡಿ:ಯಾವುದೇ ಸರಕಾರಗಳು ಇದ್ದರೂ ಕೂಡಾ ೨೨೪ ಮತಕ್ಷೇತ್ರಗಳಿಗೂ ಅನುಧಾನ ಸಮಾನ ಹಂಚಿಕೆ ಮಾಡುವುದು ಆರೋಗ್ಯಕರ ವಿಚಾರ ಸಾರ್ವಜನಿಕರಿಗೆ ಬೇಕಾದ ಮೂಲಸೌಲಭ್ಯಗಳಾದ ನೀರು.ರಸ್ತೆ ,ವಿದ್ಯುತ ,ಶಿಕ್ಷಣ ಒದಗಿಸುವುದು ಸರಕಾರಗಳ ಆದ್ಯೆ ಕರ್ತವ್ಯ.ಆದರೆ ಆಡಳಿತ ಮಾಡುವಸರಕಾರಗಳು ಬೇರೆ ವಿಧದಲ್ಲಿ ಸಾಗುತ್ತಿವೆ ಇದನ್ನು ಸದನದಲ್ಲಿ ಪ್ರಶ್ನಿಸುವ ಮೂಲಕ ಈ ಭಾಗಕ್ಕೆ ಗೌರವ ತರುವ ಕೆಲಸ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಯಿಂದ ಎಸ್.ಸಿ.ಪಿ ಟಿ.ಎಸ.ಪಿ ನಾದ.ಕೆ.ಡಿ ಗ್ರಾಮದಿಂದ ಅಂಬೇಡ್ಕರ ಭವನದವರೆಗೆ ಸಿ.ಸಿ ರಸ್ತೆ. ಸಂಗೋಗಿ ಶಿರಶ್ಯಾಡ ನಾದ ರಸ್ತೆ, ನಾದ ಗೋಳಸಾರ,ಮಿರಗಿ ರಸ್ತೆ. ನಾದ ಬಿ.ಕೆ ಗ್ರಾಮದ ಪ್ರವಾಸಿ ಮಂದಿರ ನಿರ್ಮಿಸುವುದು ಹಾಗೂ ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಾದ ಬಿ.ಕೆ .ನಾದ ಕೆ.ಡಿ ಗ್ರಾಮಗಳ ಮನೆ ಮನೆಗಳ ನೀರು ಸಂಪರ್ಕ ಯೋಜನೆ ಒಟ್ಟು ೧೧೭೧. ೮೭ ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ೨೨೪ ಕ್ಷೇತ್ರಗಳಿಗೂ ಸಮಾನಾಂತರ ವಾಗಿ ಅನುದಾನ ಹಂಚಿಕೆ ಮಾಡುವುದು ಸರಕಾರಗಳ ಕರ್ತವ್ಯವಾಗಿದೆ ಆದರೆ ಬೇರೆ ದಾರಿಯತ್ತ ಸಾಗಿವೆ.
ತಾಲೂಕಿನಲ್ಲಿ ೨೦೧೩-೨೦೧೮ರವರೆಗೆ ಲೋಕೋಪಯೋಗಿ ಇಲಾಖೆ.ಪಿಆರ್‌ಇಡಿ ಪ್ರಧಾನ ಮಂತ್ರಿ ಸಡಕ್ ರಸ್ತೆಗಳು ಗುಣಮಟ್ಟದಾಗಿದ್ದವು. ತಾಲೂಕಿನಲ್ಲಿ ೪೦ ವರ್ಷಗಳಿಂದ ಆಗದೆ ಇರುವ ಅನೇಕ ಅಭಿವೃದ್ದಿಪರ ಯೋಜನೆಗಳು ನನ್ನ ಮತಕ್ಷೇತ್ರಕ್ಕೆ ಧಾರೆ ಎರೆದಿರುವೆ ನನ್ನ ಅಧಿಕಾರ ಅವಧಿ ಸುವರ್ಣಾಕ್ಷಗಳಿಂದ ಬರೆಯು ವಂತೆ ಮಾಡಿ ಜಿಲ್ಲೆಯಾಗುವ ಕನಸ್ಸು ಕಂಡಿದ್ದೇನೆ ಆದರೆ ರಸ್ತೆಗಳು ಮಾತ್ರ ನನ್ನ ನೆಮ್ಮದಿ ಹಾಳುಮಾಡಿ ದಂತಾಗಿತ್ತು ಇದಕ್ಕೆ ಇಂದಿನ ಸರಕಾರದಿಂದ ಕೇವಲ ೨೫ ಕೋಟಿ ರಸ್ತೆ ಸುಧಾರಣೆಗೆ ಅನುಧಾನ ಕೊಟ್ಟಿದ್ದಾರೆ ಆದರೆ ಇದು ಸಾಲುವುದಿಲ್ಲ ಹೀಗಾಗಿ ಪ್ರಮುಖ ರಸ್ತೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಕೆಲಸ ಕಾರ್ಯಗಳನ್ನು ಅನುಧಾನದ ಲಭ್ಯತೆ ಮೇಲೆ ಹಂಚಿಕೆ ಮಾಡುವುದು ಆಡಳಿತ ಪಕ್ಷಗಳ ಆರೋಗ್ಯಕರ ವಿಚಾರವಾಗಿದೆ.
ಕಾಲುವೇಯ ೧೯ನೇ ಡಿಸ್ಟೂçಬಿಟರ್ ಕ್ಯಾನಲ್‌ಗೆ ನೀರು ಬರುತ್ತಿಲ್ಲ ಎಂಬ ಕೂಗು ಬಹುದಿನಗಳಿಂದ ಈ ಭಾಗದ ರೈತರ ಅಳಲಾಗಿದೆ. ಈ ಹಿಂದೆ ರಾಜಕಾರಣಿಗಳು ಗೋಣಿಚೀಲದಲ್ಲಿ ತಂಬಿಕೊAಡು ಹೋಗುವಾಗ ಅಚಾರ್ತ್ಯುದಿಂದ ನೀವು ಸಮ್ಮನ್ನಿದ್ದಿರುವದರಿಂದಲೇ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಪ್ರಶ್ನೆ ಮಾಡುವ ನೈತಿಕತೆ ಜನರಲ್ಲಿ ಬರಬೇಕು. ಸರಕಾರದ ಯೋಜನೆಗಳಿಗೆ ಸರಿಯಾಗಿ ನಡೆಯುತ್ತವೆಯೋ ಇಲ್ಲೋ ಎಂಬುದು ನೋಡುವುದು ಸಾರ್ವಜನಿಕರ ಈ ಭಾಗದ ಜನರ ಕರ್ತವ್ಯ ನಾವೇರೂ ನಮ್ಮ ಮನೆಯಿಂದ ಹಣ ತಂದು ಈ ಯೋಜನೆಗಳಿಗೆ ಹಾಕತ್ತಿಲ್ಲ ನಿಮ್ಮ ಹಣಕ್ಕೆ ನಿವೇ ಜವಾಬ್ದಾರರು.
ಸ್ವಾತಂತ್ರö್ಯ ಸಿಕ್ಕು ೭೦ ವರ್ಷಗಳು ಗತಿಸಿದರೂ ಯಾವೋಬ್ಬ ಜನಪ್ರತಿನಿಧಿ ಪಟ್ಟಣದಲ್ಲಿ ಒಂದೇ ಒಂದು ಸರಕಾರಿ ಪಿಯುಸಿ ಕಾಲೇಜ ತಂದಿರಲ್ಲಿಲ್ಲ. ಪುಣ್ಯಾತ್ಮರು ಬರೇ ಉಸುಕು ಮಾರುವುದು, ಝಳಕಿ ಆರ್.ಟಿ.ಓ ಇಲಾಖೆ ಹಣಗಳಿಸುವದರಲ್ಲಿ ರಾಜಕಾರಣ ಮಾಡಿದ್ದಾರೆ ವಿನಹ: ಅಭಿವೃದ್ದಿ ಮಾಡಿಲ್ಲ. ಪಟ್ಟಣದಲ್ಲಿ ಸರಕಾರದಿಂದ ಪಿಯುಸಿ ಕಾಲೇಜ ಮಂಜೂರಾತಿ ಮಾಡಿಸಿ ಅದಕ್ಕೆ ಸುಸಜ್ಜಿತ ಕಟ್ಟಡ, ಅಲ್ಪಸಂಖ್ಯಾತ ವಸತಿ ಶಾಲೆ, ಆಯ್.ಟಿ.ಆಯ್ ಕಾಲೇಜ ಈ ಹಿಂದೆ ಝಳಕಿ ಡಿಪ್ಲೋಮಾ ಕಾಲೇಜಿನಲ್ಲಿ ವಿಧ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿದ್ದರು ಇದನ್ನು ಅರಿತು ಝಳಕಿ ಶೈಕ್ಷಣಿಕ ವಿಧ್ಯಾಕಾಶಿ ಮಾಡಬೇಕು ಎಂದು ಪಣ ತೋಟ್ಟು ಇಂದು ಅನೇಕ ಶಿಕ್ಷಣ ಸಂಸ್ಥೆಗಳು ಮಂಜೂರು ತರುವುದರೊಂದಿಗೆ ಗುಣಮಟ್ಟದ ಕಟ್ಟಡ ಮಾಡಿಸಿದ್ದೇನೆ.
ಪಟ್ಟಣದಲ್ಲಿ ರಾತ್ರಿ ಹಗಲು ಎನ್ನದೆ ನೀರಿಗಾಗಿ ಅಲೇದಾಡುವ ಪರಸ್ಥಿತಿ ಇತ್ತು ನಾನು ಕರ್ನಟಕ ರಾಜ್ಯ ಜಲನಿಗಮ ಮಂಡಳಿಯ ಅಧ್ಯಕ್ಷನಾದ ಮೇಲೆ ೨೪*೭ ಶುದ್ದಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ತಾಲೂಕಿನ ಸರ್ವಸಮುದಾಯಕ್ಕೆ ಸ್ಥಳೀಯ ತಾ.ಪಂ.ಜಿ.ಪ೦ ಇತರೆ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ನೀಡಿರುವೆ . ಸಾರ್ವಜನಿಕ ರಂಗದಲ್ಲಿ ಅಧಿಕಾರ ಶಾಶ್ವತ ಅಲ್ಲ ಇರುವ ದಿನಗಳಲ್ಲಿ ನಾವು ಮಾಡಿರುವ ಕೆಲಸಗಳು ಶಾಶ್ವತ ಇರುತ್ತವೆ. ಯಾರು ನ್ಯಾಯ ,ನೀತಿ, ಧರ್ಮದಿಂದ ಇದ್ದಾರೆ ಹಾಗೂ ಸರ್ವಸಮುದಾಯವನ್ನು ಪ್ರೀತಿಯಿಂದ ಕಂಡಿದ್ದಾರೆ. ಅಂತಹವರ ಪರವಾಗಿ ಸದಾ ಇರಬೇಕು ಎಂದರು.
ಗೋಳಸಾರದ ಅಭಿನವಪುಂಡಲಿ೦ಗ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದರು. ನಾದ ಶ್ರೀಮಠದ ಶಿವಾನಂದ ಶಿವಾಚಾರ್ಯರು ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಕಾಂಗ್ರೆಸ್ ಮುಖಂಡ ಸಿದ್ದರಾಯ ಐರೋಡಗಿ ಪ್ರಾಸ್ತಾವಿಕ ಮಾತನಾಡಿದರು.
ಎಂ.ಆರ್ ಪಾಟೀಲ ,ಸಿದ್ದಾರಾಯ ಐರೋಡಗಿ, ಮಂಜು ಕಾಮಗೊಂಡ, ಪರಶುರಾಮ ಕಾಂಬಳೆ, ಪರಶುರಾಮ ಭಾಸಗಿ, ಜಾವೀದ ಮೋಮಿನ, ಶ್ರೀಮಂತ ಖಸ್ಕಿ,ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಎಸ್ ಆರ್ ರುದ್ರವಾಡಿ, ಸೋಮು ಮ್ಯಾಕೇರಿ, ಹಣಮಂತರಾಯಗೌಡ ಪಾಟೀಲ, ಮಲ್ಲು ಮಡ್ಡಿಮನಿ, ಸಂಗಣ್ಣಾ ಹೊಸುರ, ದಯಾನಂದ ಸಂಗೂಗಿ, ವಿರೂಪಾಕ್ಷಯ್ಯಾಸ್ವಾಮಿ ಹಿರೇಮಠ ಚಂದಣ್ಣಾ ಆಲಮೇಲ ವೇದಿಕೆಯಲ್ಲಿದ್ದರು.