ಅ.6ರಂದು ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮ
ಬಸವನಬಾಗೇವಾಡಿ:ಪ್ರತಿ ವರ್ಷದಂತೆ ಈ ವರ್ಷವು ವಿಜಯದಶಮಿ ಹಬ್ಬದ ಪ್ರಯುಕ್ತ ಅ. 6 ಗುರುವಾರ ವಿಜಯಪುರದ ನನ್ನ ತೋಟದ ಮನೆಯಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕ್ಷೇತ್ರದ ಗುರು ಹಿರಿಯರು ಅಭಿ ಮಾನಿಗಳು ನನ್ನ ಹಿತೈಸಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಸಕ ಶಿವಾನಂದ ಪಾಟೀಲ ಪ್ರಕಟನೆ ನೀಡಿ ದ್ದಾರೆ.