ಕೃತಕ ಬುದ್ದಿಮತೆ ವಿಷಯದ ಕುರಿತು ತರಬೇತಿ
ಇಂಡಿ: ಆರ್.ಎಂ ಶಹಾ ಪಬ್ಲೀಕ್ ಶಾಲೆಗೆ ಕಲಬುರ್ಗಿ, ಶಿಗ್ಗಾವಿ, ಶಿವಮೊಗ್ಗ ಪೊಲೀಸ್ ಪಬ್ಲಿಕ್ ಶಾಲೆಯ ಶಿಕ್ಷಕ ಭೇಟಿ ನೀಡಿ ಅಟಲ್ ಟಿಂಕರಿ೦ಗ್, ಗಣಿತ, ವಿಜ್ಞಾನ ಗಣಕಯಂತ್ರ ಲ್ಯಾಬ್‌ಗಳ ವಿಕ್ಷಣೆ ಮಾಡಿ ಕೃತಕ ಬುದ್ದಿಮತೆ ವಿಷಯದ ಕುರಿತಾಗಿ ತರಬೇತಿ ನೀಡಲಾ ಯಿತು.
ಕೋರಮಂಗಲ ಪಬ್ಲಿಕ ಶಾಲೆಯ ಪ್ರಾಚಾರ್ಯ ತನುಜಾ ಮಾತನಾಡಿ ಈ ಶಾಲೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಸವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ. ಇಲ್ಲಿನ ಪಾಠ ಪೀಠೋಪಕರಣ ಬೋದನಾ ಸಾಮುಗ್ರಿ ಕಟ್ಟಡ ನೋಡಿ ದಕ್ಷಿಣ ವಿಧ್ಯಾ ಕಾಶಿಯಂತೆ ಕಂಗೋಳಿಸುತ್ತಿದೆ ಎಂದು ಸಂತಸ ಪಟ್ಟರು.
ಕೆ.ಎಸ್.ಆರ್.ಪಿ ರಿರ್ಜವ್ ಪೊಲೀಸ್ ಇನಿಸ್ಪೇಕ್ಟರ್ ನಾಗೇಂದ್ರ ಸಂಸ್ಥೆಯ ಸಂಸ್ಥಾಪಕ ಶಹಾ ಇವರು ಶಿಕ್ಷಣ ಪಿತಾಮಹರಂತೆ ಕಂಗೋಳಿಸುತ್ತಿದ್ದು ೮೮ ವಯಸ್ಸಿನಲ್ಲಿ ಶಿಕ್ಷಣದ ದಾಸೋಹ ನೀಡುತ್ತಿರುವ ಇವರ ಕಾರ್ಯ ಶ್ಲಾö್ಯಗನೀಯ, ಭಗವಂತ ಇವರ ಆರೋಗ್ಯ ಮತ್ತಷ್ಟು ವೃದ್ದಿಸಲಿ ಎಂದರು.
ಶಿಕ್ಷಣ ಒಂದು ಪವಿತ್ರವಾದ ವಸ್ತು ಜೀವನದಲ್ಲಿ ಎಲ್ಲವನ್ನು ಕಂಡಿದ್ದೇನೆ ,ಭಗವಂತ ಎಲ್ಲವನ್ನು ಕೊಟ್ಟಿದ್ದಾನೆ ಇದೊಂದು ಪ್ರಯೋಗ ಮಾಡಬೇಕು ಗಡಿ ಭಾಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂಬ ಸದಾಭಿಪ್ರಾಯದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ ಹೊರತು ಗಳಿಕೆಗಾಗಿ ಅಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಆರ್ ಶಹಾ ಮಾತನಾಡಿದರು.
ಆಡಳಿತಾಧಿಕಾರಿ ಕಲ್ಪನಾ ಶಹಾ, ನೀರಜಾಕ್ಷಿ ಕೆ, ಪ್ರಾಚಾರ್ಯರಾದ ಪರವೀಣ ಜಮಾದಾರ, ಪ್ರಕಾಶ ಪಾಟೀಲ, ವೇದಿಕೆ ಯಲ್ಲಿದ್ದರು.