ಕಲ್ಲು ಗಣಿಗಾರಿಕಾ ಕ್ವಾರಿಯಲ್ಲಿ ಬಿದ್ದು ವ್ಯಕ್ತಿ ಸಾವು
ಕೊಲ್ಹಾರ:ಪಟ್ಟಣದ ರಾವತ್ ದಳವಾಯಿ(೫೦) ಎಂಬ ವ್ಯಕ್ತಿಯೂ ಕ್ವಾರಿಯಲ್ಲಿ ಸ್ನಾನ ಮಾಡಲು ಹೋದ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಕಾಲು ಜಾರಿಬಿದ್ದು ಸಾವಿಗಿಡಾಗಿದ್ದಾನೆ.
ಕೊಲ್ಹಾರ ಯುಕೆಪಿ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.