ದೀನರ ದುರ್ಬಲರ ರೋಗಿಗಳ ಸೇವೆಯೇ ದೇವರ ಸೇವೆ
ಇಂಡಿ:ಮಹಾತ್ಮಾಗಾಂಧಿಜೀಯವರು ಬಡವರ ದೀನರ ದುರ್ಬಲರ ರೋಗಿಗಳ ಸೇವೆಯೇ ದೇವರ ಸೇವೆ ಎಂದು ಸ್ವತ ತಾವೇಕ್ಷಯ ರೋಗಿಗಳ ಸೇವೆ ಮಾಡಿದ್ದಾರೆ ಎಂದು ಎಸ್.ಸಿ ಮೋರ್ಚಾ ತಾಲೂಕಾ ಅಧ್ಯಕ್ಷ ರಮೇಶ ಧರೇನವರ ಹೇಳಿದರು.
ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿ ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾ ಇಂಡಿ, ಮಂಡಲ ವತಿ ಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಕಾರ್ಯಕ್ರಮ ಹಾಗೂ ಅ. ೨ ಮಹಾತ್ಮಾ ಗಾಂಧಿಜೀಯವರ ಕಾರ್ಯಕ್ರಮದ ಪ್ರಯುಕ್ತ ಕ್ಷಯ ರೋಗ ನಿರ್ಮೂಲನ ಅಭಿಯಾನ ದಲ್ಲಿ ಮಾತನಾಡಿದ ಅವರು ಭಾರತ ಬಲಿಷ್ಠಗೋಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ದೂರದೃಷ್ಠಿಯ ಕಾರಣ, ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷೀಕ ಕಾರ್ಯಕ್ರದ ಅಂಗವಾಗಿ ಇಂದು ಅಕ್ಟೋಬರ್ ೨ ಮಹಾತ್ಮಾ ಗಾಂಧಿಜೀವರು ಕ್ಷಯ ರೋಗಿಗಳ ಸೇವೆ ಮಾಡುವ ಮೂಲಕ ಜಂಟಿ ಮಹಾನ್ ನಾಯಕ ರನ್ನು ಸ್ಮರಿಸಿದಂತಾಗುತ್ತದೆ.
ಸೇವಾ ಸಪ್ತಾಹ ಕೊನೆಯ ದಿನ ಅಕ್ಟೋಬರ್೨, ಪ್ರತಿ ಕ್ಷಯ ರೋಗಿಗಳಿಗೆ ಬಿಜೆಪಿ ಮುಖಂಡರು ದತ್ತು ಪಡೇದು ಪ್ರೋಟೀನ್ ಯುಕ್ತ ಆಹಾರ ಒದಗಿಸಲಾಗುವುದು. ಕೇಂದ್ರದ ಪ್ರಧಾನ ಮಂತ್ರಿಗಳು ೨೦೨೫ರಷ್ಟ ರಲ್ಲಿಯೇ ಕ್ಷಯ ಮುಕ್ತ ದೇಶ ಮಾಡುವ ಸಂಕಲ್ಪ ಹೊಂದಿದ್ದಾರೆ ಇದಕ್ಕೆ ದೇಶದ ಪ್ರತಿಯೋಬ್ಬ ನಾಗರೀಕರು ಸಹಕರಿಸಬೇಕು ಎಂದರು.
ಅನೀಲ ಜಮಾದಾರ ,ಕಾಸುಗೌಡ ಬಿರಾದಾರ ಮಾತನಾಡಿದರು. ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಅನೀಲ ಜಮಾದಾರ,ಸಿದ್ದಲಿಂಗ ಹಂಜಗಿ, ಮಲ್ಲಿಕಾರ್ಜುನ ಕೀವುಡೆ,ವಿಜಯಲಕ್ಷಿö್ಮÃ ರೂಗಿಮಠ, ಡಾ. ರಾಜಶೇಖರ ಕೊಳೇಕರ್, ವಿನೋದ ಚವ್ಹಾಣ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು.