ವಿಶ್ವದ ಅನೇಕ ದೇಶಗಳಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ: ಎ.ಸಿ ರಾಮಚಂದ್ರ ಗಡಾದೆ
ಇಂಡಿ:ವಿಶ್ವದಲ್ಲಿಯೇ ಭಕ್ತಿ ,ಭಾವ ಶೃದ್ದೆಯಿಂದ ಪೂಜ್ಯನಿಯಕ್ಕೆ ಪಾತ್ರರಾದ ಇಡೀ ವಿಶ್ವದ ಅನೇಕ ದೇಶಗಳಲ್ಲಿ ಗೌರವಕ್ಕೆ ಪಾತ್ರರಾದ ನಾಯಕರಲ್ಲಿ ಮಹಾತ್ಮಾಗಾಂಧೀಜಿ ಯವರು ಮಾತ್ರ ಎಂದು ಎ.ಸಿ ರಾಮಚಂದ್ರ ಗಡಾದೆ ಹೇಳಿದರು.
ತಾಲೂಕಾ ಆಢಳಿತ ವತಿಯಿಂದ ಹಮ್ಮಿಕೊಂಡ ಮಹಾತ್ಮಾಗಾಂಧೀಜಿ, ಲಾಲ ಬಹದ್ದೂರ ಶಾಸ್ತೀಜಿಯವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸತ್ಯ. ಅಂಹಿಸೆ, ತ್ಯಾಗ ಮಹಾತ್ಮಾಗಾಂಧೀಜಿಯವರ ಮೂರು ಅಸ್ತçಗಳಾಗಿದ್ದವು.
ತಮ್ಮ ಜೀವನದ ಕೊನೆಯವರೆಗೂ ಸತ್ಯೆವನ್ನೆ,ಅಂಹಿಸೆ, ತ್ಯಾಗ ಬದುಕಿನ ಉದ್ದಕ್ಕೂ ಪರಿಪಾಲನೆ ಮಾಡಿದರು. ಈ ದೇಶದ ಸ್ವಾತಂತ್ರö್ಯಕ್ಕಾಗಿ ಹಗಲೀರಳು ಶ್ರಮಿಸಿದ್ದಾರೆ. ನಮ್ಮ ಬದುಕುವ ರೀತಿ ಇತರರಿಗೆ ಆದರ್ಶ ಪ್ರಾಯ ವಾಗಬೇಕು ಎಂಬ ತತ್ವ ಗಾಂಧೀಜಿ ನಂಬಿಕೆ ಇಟ್ಟಿದ್ದರು. ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತರಾಗಿ ಅವರ ಹೆಜ್ಜೆಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಗೌರವ.
ಲಾಲ್ ಬಹದ್ದೂರ ಶಾಸ್ತಿçÃಜಿಯವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಗಳು, ಮಹಾತ್ಮಾ ಗಾಂಧೀಯವರಿ0ದ ಪ್ರಭಾವಿತ ರಾಗಿದ್ದರು. ಭಾರತ ಸ್ವಾತಂತ್ರö್ಯಕ್ಕಾಗಿ ಮಹಾತ್ಮಾಗಾಂದೀಜಯರ ಜೊತೆ ಹೋರಾಟ ಮಾಡಿದ್ದಾರೆ. ಹಾಲು ಉತ್ಪಾದನೆಗಾಗಿ ಶ್ವೇತ ಕ್ರಾಂತಿ ಮಾಡಿ. ಜೈ ಜವಾನ್, ಜೈಕಿಸಾನ್ ಅಂದರೆ ರೈತನಿಗೆ ಜಯವಾಗಲಿ, ಸೈನಿಕನಿಗೆ ಜಯವಾಗಲಿ ಎಂಬುದು ಅವರ ಘೋಷಣೆಯಾಗಿದೆ ಇಂತಹ ಮಹಾನ್ ದಾರ್ಶನಿಕರ ಮಾರ್ಗದಲ್ಲಿ ಪ್ರತಿಯೋಬ್ಬರು ನಡೆಯೋಣ ಎಂದರು.
ತಹಶೀಲ್ದಾರ ನಾಗಯ್ಯಾ ಹಿರೇಮಠ ಮಾತನಾಡಿದರು.
ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ, ತೋಟಗಾರಿಕಾಧಿಕಾರಿ.ಎಸ್.ಎಸ್ ಹಿರೇಮಠ, ಕಂದಾಯ ಅಧಿಕಾರಿ ಬಸವರಾಜ ರಾವೋರ, ಸಂತೋಷ ಹೊಟಗಾರ್ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಸಿಬಂದ್ದಿ ಇದ್ದರು.