ಮಹರ್ಷಿ ವಾಲ್ಮೀಕಿ ಜಯಂತಿ ಕಡ್ಡಾಯ ಆಚರಣೆ: ತಹಶೀಲ್ದಾರ ನಾಗಯ್ಯಾ ಹಿರೇಮಠ
ಇಂಡಿ: ಇಂದು ಶನಿವಾರ ಮಿನಿವಿಧಾನಸೌಧಾ ಸಭಾ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ತಹಶೀಲ್ದಾರ ನಾಗಯ್ಯಾ ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತ್ತು.
ಈ ಸಂದರ್ಬದಲ್ಲಿ ಎಸ್ಟೀ ಸಮುದಾಯದ ಮುಖಂಡ ಅರ್ಜುನ ಬಿರಡ ಮಾತನಾಡಿ ಎಸ್ಟಿ ಸಮುದಾಯಕ್ಕೆ ಈಗಾಗಲೆ ಸರಕಾರ ೩ ಪ್ರತಿಶತ ಮಿಸಲಾತಿ ನೀಡಲಾಗಿದ್ದು ೭.೫ ಮೀಸಲಾತಿ ನೀಡಬೇಕು ಎಂದು ಸರಕಾರದ ಮೇಲೆ ವಾಲ್ಮೀಕಿ ಸಮುದಾಯದ ಶ್ರೀಗಳು ಒತ್ತಡ ಹಾಕಿದ್ದಾರೆ ಆದರೆ ಇದಕ್ಕೆ ಸರಕಾರ ಸ್ಪಂದಿಸಿಲ್ಲ.
ಹೀಗಾಗಿ ಶ್ರೀಗಳ ಸೂಚನೆ ಮೇರೆಗೆ ಸರಕಾರಿ ಇಲಾಖೆಯ ಅಧಿಕೃತ ಆದೇಶದ ಮೆರೆಗೆ ಸರಕಾರಿ ಕಚೇರಿಗಳಲ್ಲಿ ತಾಲೂಕಾಡಳಿತ ವತಿಯಿಂದ ನೀವು ಆಚರಣೆ ಮಾಡಿ ನಮ್ಮ ಅಭ್ಯೆಂತರವಿಲ್ಲ ನಮ್ಮ ಸಮುದಾಯಕ್ಕೆ ಶ್ರೀಗಳು ಎಂದು ಆಚರಿಸಬೇಕು ಎಂಬ ತೀರ್ಮಾನ ಮಾಡಿದ ನಂತರ ನಾವು ಆಚರಿಸುತ್ತೇವೆ ಎಂದು ಸಮುದಾಯದ ಮುಖಂಡರೊ0ದಿಗೆ ಒಕ್ಕೂರಲ್ಲಿನ ಅಭಿಪ್ರಾಯ ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ತಹಶೀಲ್ದಾರ ನಾಗಯ್ಯಾ ಹಿರೇಮಠ ಮಾತನಾಡಿ ಸರಕಾರದ ಆದೇಶ ಪಾಲಿಸುವುದು ಕಡ್ಡಾಯ ವಾಗಿದ್ದು ಅ,೯ ರಂದು ಶಾಲೆ,ಕಾಲೇಜುಗಳು, ಅಂಗನ ವಾಡಿ ಕೇಂದ್ರಗಳು, ಪಂಚಾಯತಿಗಳು ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರತಿಯೋಬ್ಬ ನೌಕರದಾರರು ಹಾಜರಿದ್ದು ತಮ್ಮ ಇಲಾಖೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವಿಟ್ಟು ಕಡ್ಡಾಯ ಆಚರಣೆ ಮಾಡಬೇಕು. ಒಂದು ವೇಳೆ ಲೋಪದೋಷಗಳು ಕಂಡು ಬಂದರೆ ಆಯಾ ಇಲಾಖೆಗಳನ್ನೆ ಹೋಣೆಗಾರ ರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಧ್ಯಕ್ಷರು ಸಮಾಜದ ಗಣ್ಯರು ಸರಕಾರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ ಇಂಡಿ ಮನವಿ ಮಾಡಿದರು.
ಬಿ.ಸಿ.ಎಂ ಅಧಿಕಾರಿ ವಿಜಯಕುಮಾರ ಕೌಲಗಿ, ಪುರಸಭೆ ಅಧಿಕಾರಿ ಕೆ.ಎಸ್ ಲಕ್ಷಿö್ಮÃಶ , ಕಂದಾಯ ಅಧಿಕಾರಿ ಬಸವರಾಜ ರಾವೋರ, ಸಂತೋಷ ಹೊಟಗಾರ್, ಆರ್,ವ್ಹಿ ಪಾಟೀಲ, ಹಣಮಂತ ಅರವತ್ತು, ಚಂದ್ರಶೇಖರ ಹೊಸಮನಿ, ಸಚೀನ ಬೋಳೆ ಗಾಂವ್, ಹುಸೇನಿ ಕಟ್ಟಿಮನಿ, ಚಂದು ಗಜಾಕೋಶ , ಪುಂಡಲೀಕ ಗೋಂದಳಿ ಸಮಾಜದ ಮುಖಂಡರಾದ ಅರ್ಜುನ ಬಿರಡ, ಅರ್ಜುನ ನಾಯ್ಕೋಡಿ, ರಾಘವೇಂದ್ರ ನಾಯ್ಕೋಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಾಲೂಕಾಧಿ ಕಾರಿಗಳು ಉಪಸ್ಥಿತರಿದ್ದರು.