ದೀಪಾವಳಿ ಮಹಾಲಕ್ಷ್ಮೀ ಪೂಜೆ ೨೪ ರಂದು ಮಾಡಲು ಶ್ರೀಗಳ ಮಾಹಿತಿ
ಕೊಲ್ಹಾರ:ಅ.೨೫ರ ಮಂಗಳವಾರ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಇರುವುದರಿಂದ ಅಂಗಡಿಗಳ ಮಹಾಲಕ್ಷ್ಮೀ ಪೂಜೆ ದಿನಾಂಕ ೨೪-೧೦-೨೦೨೨ ರ ಸೋಮವಾರ ದಿವಸ ನರಕ ಚತುರ್ದಶಿ ಆರತಿ ಹಬ್ಬ ಆಚರಣೆ ಸಾಯಂಕಾಲ ೫-೨೭ ರ ನಂತರ ಅಂಗಡಿಯ ಮಹಾಲಕ್ಷ್ಮೀ ಪೂಜೆಯನ್ನು ಮಾಡಬೇಕು.
ಅ.೨೫ರ ಮಂಗಳವಾರ ಬೆಳಿಗ್ಗೆ ೬ ರಿಂದ ಮನೆಯಲ್ಲಿ ಅಮವಾಸ್ಯೆ ವಾಹನ ಪೂಜೆ ಹಗಲು ಲಕ್ಷ್ಮೀ ಪೂಜೆಯನ್ನು ೧೨:೧೦ ರ ವರೆಗೂ ಮಾಡಬಹುದು. ಅ.೨೬ರ ಬುಧವಾರ ದಿವಸ ಸಾಡೆತಿನಿ ಮಹೋತ್ಸವ ಪಾಡ್ಯದ ಪೂಜೆಯನ್ನು ಮಾಡಬೇಕು ಎಂದು ಕೊಲ್ಹಾರ ಹಿರೇಮಠದ ಪಡದಪ್ಪಯ್ಯ ಸ್ವಾಮಿಜಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.