ಶರಣರು ಸುಫಿ ಸಂತರು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ
ಇಂಡಿ:ನಮ್ಮ ನಾಡು ಪುಣ್ಯದ ಬೀಡು, ಇಲ್ಲಿ ಹಲವಾರು ಶರಣರು ಸುಫಿ ಸಂತರು, ಮಹಾತ್ಮರು ಹುಟ್ಟಿ, ನಾಡು- ನುಡಿ, ಧರ್ಮ-ಸಂಸ್ಕೃತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ತಾಂಬಾ ಗ್ರಾಮದಲ್ಲಿ ಶ್ರೀ ಹಜರತ್ ಮಾಶಿಮಶಾವಲಿ ದರ್ಗಾದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶ ಜಗತ್ತಿನಲ್ಲಿಯೇ ತನ್ನದೆಯಾದ ವಿಶಿಷ್ಟ ಸಂಸ್ಕೃತಿ ಹೊಂದಿದೆ.
ದೇಶ ಧರ್ಮ ಪಂಗಡ ಗಳಿ0ದ ಕೂಡಿದ ವಿಶಿಷ್ಟ ಆಚಾರ ವಿಚಾರಗಳನ್ನು ಹೊಂದಿದ ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲಾ ಜನರು ಒಂದು ಕಡೆ ಸೇರಿ ಜಾತ್ರೆಗಳು, ಹಬ್ಬಗಳು ಆಚರಣೆ ಮಾಡುವು ದರಿಂದ ಜಾತ್ಯಾತೀತ ಮನೋಭಾವವನೆ ಮತ್ತು ಪರಸ್ವರ ಪ್ರಿತಿ ವಿಶ್ವಾಸ ಗಳಿಂದ ಸಮಾಜದಲ್ಲಿ ಬದಕು ಸಾಗಿಸಲು ಅನುಕೂಲವಾಗಿವೆ ಎಂದು ಹೇಳಿದರು.
ಸಿಂದಗಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಹಿಂದೂ ಮುಸ್ಲಿಂ ಸಮುದಾಯದವರು ಜಾತ್ರೆಯನ್ನು ಆಚರಿಸುವುರು ಇದು ಧಾರ್ಮಿಕ ಸಾಮಾಜಿಕ ಹಾಗೂ ಭಾವೈಕ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಸಮುದಾಯಗಳು ಕಷ್ಟ-ಸುಖ ಎರಡನ್ನು ಸಮಾನವಾಗಿ ಹಂಚಿಕೊ0ಡು ಗೌರವಯುತ ವಾಗಿ ಬದುಕುತ್ತಿರುವುದು ಸಂತೋಷವೆನಿಸುತ್ತದೆ. ಇಂತಹ ಧಾರ್ಮಿಕ ಆಚರಣೆಗಳು ನಾಡಿನಾದ್ಯಂತ ಪಸರಿಸಲಿ ಎಂದು ಪ್ರಾರ್ಥಿಸಿದರು.
ದಿವ್ಯ ಸಾನಿಧ್ಯ ವಹಿಸಿ ಮುಪ್ತಿ ಮೊಹ್ಮದ ಅಬುಬಕರ ಆಸಿಫಿ ಖಾದರಿವರು ಆರ್ಶೀವಚನ ನೀಡಿದರು.
ಜೆ. ಎಸ್. ಹತ್ತಳಿ, ಜಾವೀದ್ ಮೊಮಿನ್, ಆರ್. ಸಿ. ನಿಂಬಾಳ, ಪ್ರಕಾಶ ಮುಂಜಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಇಲಿಯಾಸ್ ಬೋರಾಮಣಿ, ಅಮರನಾಥ ಅಲೇಗಾವಿ, ಮಹಮ್ಮದ ಮುಸ್ತಾಕ ನಾಯ್ಕೋಡಿ, ಶ್ರೀಮಂತ ಲೋಣಿ, ಮಹ್ಮದ ವಾಲೀಕಾರ, ಮಾಶೀಮ ವಾಲಿಕಾರ, ನಾಗಪ್ಪ ಕುರುಬತ್ತಳಿ, ಮಹ್ಮದ ದಡೇದ, ಪರಸು ಬಿಸನಾಳ, ಸಲಿಮ ಚಿಕ್ಕಗಸಿ, ಮುನ್ನಾ ನಾಗಠಾಣ. ಎ. ಎಸ್. ಸರಸಂಬಿ ನಿರೂಪಿಸಿದರು. ಎಮ್.ಎಮ್ ವಾಲಿಕಾರ ವಂದಿಸಿದರು.
*
ಗ್ರಾಮದ ಹಿಂದೂ ಮುಸ್ಲಿಂ ಎನ್ನುವ ಬೇದಭಾವವಿಲ್ಲದೆ ಶ್ರೀ ಹಜರತ್ ಮಾಶಿಮಶಾವಲಿ ಜಾತ್ರೆಯನ್ನು ಆಚರಿಸುತ್ತಿರುವುದರಿಂದ ಶರಣರು ಸುಫಿ ಸಂತರು ಜಾತಿ ನಿರರ್ತಕ ನೀತಿ ssssಲೋಕ ರಕ್ಷಕ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವುದನ್ನು ನಿಜಮಾಡಿದ ಗ್ರಾಮಸ್ಥರಿಗೆ ಅಭಿನಂದಿಸುತ್ತೆನೆ.
ರಮೇಶ ಭೂಸನೂರ-ಸಿಂದಗಿ ಶಾಸಕ
