ಖರ್ಗೆ ಎ.ಐ.ಸಿ.ಸಿ ಸ್ಥಾನ ಸಂತಸ: ಯಶವಂತರಾಯಗೌಡ ಪಾಟೀಲ
ಇಂಡಿ:ಎ.ಐ.ಸಿ.ಸಿ ನೂತನ ಅಧ್ಯಕ್ಷರಾಗಿ ಕರ್ನಾಟಕದ ಹಿರಿಯ ಕಾಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮಾತೃ ಹೃದಯದ ಪಕ್ಷ ರಾಜಕೀಯ ಅನುಭವಿ ಹೊಂದಿರುವ ಕರ್ನಾಟಕ ಹಿರಿಯ ನಾಯನಿಗೆ ಇಂತಹ ಹುದ್ದೆ ನೀಡಿರುವುದು ಅಪಾರ ಸಂತಸ ತಂದಿದೆ.
ಖರ್ಗೆಯವರ ನೈತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಉನ್ನತ ಮಟ್ಟಕ್ಕೆ ಏರಲಿದೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿದರು.
ಖರ್ಗೆ ಸಾಹೇಬರ ಆಯ್ಕೆ ರಾಜ್ಯ ಅಷ್ಠೇ ಅಲ್ಲ ರಾಷ್ಟçಮಟ್ಟದಲ್ಲಿ ಕಾಂಗ್ರೆಸ್ ಬಲ ಬಂದ0ತಾಗಿದೆ. ಈ ಉನ್ನತ ಸ್ಥಾನ ಅಲಂಕರಿಸಿ ರುವುದಕ್ಕೆ ಪಕ್ಷಕ್ಕೆ ಆನೆ ಬಲಬಂದಿದೆ. ೫೦ ವರ್ಷ ಕಾಂಗ್ರೆಸ್ ಕಟ್ಟಾಳುಗಳಾಗಿ ಪಕ್ಷವೇ ಜೀವಾಳ ಎಂದು ತ್ಯಾಗ,ನಿಷ್ಠೇ, ಹೋರಾಟದ ಪ್ರತಿಫಲ ಇದ್ದರೆ ಇಂತಹ ಅವಕಾಶ ಸಿಗುತ್ತದೆ ಎನ್ನುವುದಕ್ಕೆ ಖರ್ಗೆಜೀ ಸಾಹೇಬರೇ ಉದಾಹರಣೆ,
ತ್ಯಾಗ ಎಂಬ ಹೆಸರಿಗೆ ಗಾಂಧಿ ಮನೇತನ ಮಾತ್ರ ಸಿದ್ದಮಾಡಿದೆ. ಸೋನಿಯಾಗಾಂಧಿ ,ರಾಹುಲ ಗಾಂಧಿಯವರಿಗೆ ಬಂದ ಅವಕಾಶ ನಯವಾಗಿ ತೀರಸ್ಕರಿಸಿ ಮಾನವೀಯ ಮೌಲ್ಯಗಳಿಂದ ಮೆರೆದಿದ್ದಾರೆ.ಪ್ರಜಾಪ್ರಭುವ ವ್ಯವಸ್ಥೆ ಇದೆ ಎನ್ನುವುದಕ್ಕೆ ಖರ್ಗೆಜಿ ಯವರಿಗೆ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿರುವುದು ಕಾಂಗ್ರೆಸ್ ಪಕ್ಷದ ಬದ್ದತೆ.
ಹೀಗಾಗಿ ಬರುವ ಚುನಾವಣೆಯಲ್ಲಿ ಖರ್ಗೆಜಿಯವರ ಜ್ಞಾನ ,ಅಪಾರ ಅನುಭವ ಬಳಸಿ ೨೦೨೪ ರ ಚುನಾವಣೆ ಅತೀ ಹೆಚ್ಚು ಸ್ಥಾನ ಗೆಲ್ಲಿಸುವ ಆತ್ಮವಿಶ್ವಾಸ ವ್ಯಕ್ತಡಿಸಿದರು.