ಅಕ್ರಮ ಮದ್ಯ ಮಾರಾಟ ತಡೆಗಟ್ಟಿ: ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗೇಪ್ಪ
ಇಂಡಿ:ತಾಲೂಕಿನಾದ್ಯೆಂತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಅದನ್ನು ಕೂಡಲೆ ತಡೆಗಟ್ಟಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಜಿ.ಪಂ ಅಧ್ಯಕ್ಷ ಶಿವಯೋಗೇಪ್ಪ ನೇದಲಗಿ ನೈತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳ ನೂರಾರು ಸಾರ್ವಜನಿಕರು ಅಬಕಾರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ತಾಲೂಕಿನಾದ್ಯೆಂತ ಮದ್ಯ ಮಾರಾಟ ಅವ್ಯಾಹತ ವಾಗಿ ಎಗ್ಗಿಲ್ಲದೆ ಶಾಲೆ, ಕಾಲೇಜುಗಳು ಸಾರ್ವಜನಿಕ ಸ್ಥಳ, ಗುಡಿಗುಂಡಾರಗಳು ಎಂಬ ಅರಿವು ಇಲ್ಲದೆ ಮಾರಾಟ ಮಾಡುತ್ತಿದ್ದು ಸ್ಥಳೀಯ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳು ತ್ತಿಲ್ಲ.
ಇಂತಹ ಮದ್ಯ ಮಾರಾಟ ಬೇಕಾಬಿಟ್ಟಿ ನಡೆಯುತ್ತಿರುವುದರಿಂದ್ದ ಯುವ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬಿರಿ ಹಳ್ಳಿಗಳು ಕುಡುಕರಿಂದ ಹಾಳಾಗುತ್ತಿದ್ದು ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಇಂಡಿ ಸೇರಿದಂತೆ ನಾದ, ತಡವಲಗಾ, ಸಾಲೋಟಗಿ, ಝಳಕಿ, ಬಳ್ಳೋಳ್ಳಿ, ಸಂಗೋಗಿ, ಲಾಂಸ0ಗಿ, ಸಾತಪೂರ, ಖೇಡಗಿ, ಇಂಗಳಗಿ, ಹೋರ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿವೆ ಕೂಡಲೆ ಸಂಬ0ದಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೀದಿಗೀಳಿದು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಹಿಡಿದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಹಾಗೇನಾದರೂ ಕಂಡು ಬಂದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ನೀರಿಕ್ಷಕ ಎಂ.ಎಸ್ ಪಡಸಲಗಿ ಭರವಸೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಕಲ್ಲಯ್ಯಾ ಹಿರೇಪಠ, ಡಂ.ಎಸ್ ಗಿಣ್ಣಿ, ಮಹೇಶ ಹಸನಾಪೂರ, ಸಿದ್ದರಾಮ ಈಸರಗೂಡ, ಎಸ್.ಎ ಲೋಣಿ, ವಿಠ್ಠಲ ತೆನ್ನಹಳ್ಳಿ, ಚನ್ನಪ್ಪ ಪಡಗಾನೂರ, ಡಿ.ಎಸ್ ಸಾಲೋಟಗಿ, ಎಸ್ ಎಸ್ ನಂದಾಗೋಳ, ಮಹೇಶ ಚಾಂದಕವಠೆ ಸೇರಿದಂತೆ ಅನೇಕ ಜನರಿದ್ದರು.