ಅಪಘಾತ: ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ್ ಪ್ರಾಣಾಪಾಯದಿಂದ ಪಾರು
ಕೊಲ್ಹಾರ:ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ್(ಮನಗೂಳಿ) ಅವರ ಕಾರು ಹಾಗೂ ಹೈವಾ ನಡುವೆ ಅಪಘಾತ ಸಂಭ ವಿಸಿ, ಸೋಮನಗೌಡ ಪಾಟೀಲ್ ಮನಗೂಳಿ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಮನಗೂಳಿ ಪಟ್ಟಣದಿಂದ ಕೊಲ್ಹಾರ ಕಡೆಗೆ ಕುಟುಂಬ ಸಮೇತ ಹೊರಟಿದ್ದ ಅಪ್ಪುಗೌಡ ಪಾಟೀಲ್ ಅವರ ಕಾರ್ ಹಾಗೂ ಬಸವನಬಾಗೇವಾಡಿ ಕಡೆಗೆ ಹೊರಟಿದ್ದ ಹೈವಾ ನಡುವೆ ತಾಲ್ಲೂಕಿನ ಮಟ್ಟಿಹಾಳ ಕ್ರಾಸ್ ಹತ್ತಿರ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಸೋಮನಗೌಡರು ಹಾಗೂ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.